ಸಿದ್ದಾಪುರ: ಶ್ರೀಮನ್ನೆಲೆಮಾವು ಶ್ರೀಮಠ ಯಾವತ್ತೂ ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ. ಮುಂದಿನ ದಿನದಲ್ಲಿ ಮಠದಲ್ಲಿ ಭಜನಾ ಕಾರ್ಯಾಗಾರವನ್ನು ಎಲ್ಲರ ಸಹಕಾರದೊಂದಿಗೆ ನಡೆಸಲಾಗುವುದು ಎಂದು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀಗಳ ಚಾತುರ್ವಸ್ಯ ವ್ರತದ ಅಂಗವಾಗಿ ಶ್ರೀ ಲಕ್ಷ್ಮೀನೃಸಿಂಹ ಸಂಸ್ಕೃತಿ ಸಂಪದ ವೇದಿಕೆ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಜಿ.ಆರ್. ಭಾಗ್ವತ್ ತ್ಯಾರ್ಗಲ್, ವಿನಾಯಕ ಭಟ್ಟ ನೆಲೆಮಾವು, ಎಂ.ಜಿ. ಹೆಗೆ ಗೆಜ್ಜೆ ಕಿಬ್ಬಳ್ಳಿ, ಜಿ.ಎಸ್. ಹೆಗಡೆ ಇತರರಿದ್ದರು. ವೇದ ಮಂತ್ರದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ನಂತರ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ನೆಲೆಮಾವು ಹಾಗೂ ಶ್ರೀ ಓಂಕಾರ ಭಜನಾ ಮಂಡಳಿ ತಟ್ಟಿಕೈ ಅವರಿಂದ ಭಜನಾ ಸೇವೆ ನಡೆಯಿತು.