ಏಕಾಗ್ರತೆಗೆ ಶ್ರೀಮದ್ಭಗವದ್ಗೀತೆ ದಾರಿದೀಪ: ಡಾ.ವಿನಾಯಕ ಭಟ್ ಗಾಳಿಮನೆ ಅನಿಸಿಕೆ

Kdb_Bhagavad Gita
Published on

ಕಡಬ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ‘ಶ್ರೀಮದ್ಭಗವದ್ಗೀತೆ ಮತ್ತು ಯುವ ಮನಸ್ಸು’ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ, ಆಳ್ವಾಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ವಿನಾಯಕ ಭಟ್ ಗಾಳಿಮನೆ, ಶ್ರೀ ಮದ್ಭಗವದ್ಗೀತೆಯು ಎಲ್ಲ ವಯಸ್ಸಿನವರಿಗೆ ಅಗತ್ಯ ಮಾರ್ಗದರ್ಶನ ಮಾಡುತ್ತದೆ. ತತ್ವಗಳನ್ನು ಅಳವಡಿಸಿಕೊಳ್ಳಬಹುದಾದ ಅಪ್ರತಿಮ ವ್ಯಕ್ತಿತ್ವ ವಿಕಸನದ ಉಪದೇಶವೇ ಗೀತೆಯಾಗಿದೆ. ವಿದ್ಯಾರ್ಥಿಗಳು ವಿವಿಧ ಚಂಚಲ ವಿಷಯಗಳಿಗೆ ಆಕರ್ಷಿತರಾಗದೇ, ಏಕಾಗ್ರತೆ ಸಾಧಿಸಲು, ಸಮಚಿತ್ತ ಹೊಂದಲು, ಸೋತಾಗ ಮೇಲೇಳಲು ಗೀತೆಯಲ್ಲಿನ ಶ್ರೀ ಕೃಷ್ಣ-ಅರ್ಜುನರ ಸಂಭಾಷಣೆ ದಾರಿದೀಪವಾಗುತ್ತದೆ. ಇಂಥ ಶ್ರೀಮದ್ಭಗವದ್ಗೀತೆಯ ಅಧ್ಯಯನ ಎಲ್ಲರೂ ಮಾಡಿ ಜೀವನದಲ್ಲಿ ಉನ್ನತ ಸಾಧನೆ ಮಾಡಿ ಎಂದರು.

ಹಿರಿಯ ಉಪನ್ಯಾಸಕ ವಸಂತ ಕುಮಾರ್ ಡಿ.ಸ್ವಾಗತಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್ ಬಿಳಿನೆಲೆ ವಂದಿಸಿದರು. ಉಪನ್ಯಾಸಕ ಚೇತನ್ ಎಂ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net