

ಬಂಟ್ವಾಳ: ಶಿಕ್ಷಣ ಪಡೆದು ಬೌದ್ಧಿಕ ಸ್ವಾತಂತ್ರೃ ಪಡೆಯಿರಿ, ಸಂಘಟಿತರಾಗಿ ಚೈತನ್ಯಶೀಲರಾಗಿರಿ ಎಂಬ ಸರಳ ಸಂದೇಶ ನೀಡುತ್ತಾ, ನಾರಾಯಣ ಗುರುಗಳು ಹೆಜ್ಜೆಹೆಜ್ಜೆಗೂ ಅದರ ನಿದರ್ಶನ ಸಾಧಿಸಿ ತೋರಿಸಿದರು. ಸಮಾಜದ ಕಟ್ಟಕಡೆಯ ಶೂದ್ರರು, ಮಹಿಳೆಯರು ಮತ್ತು ಕಾಯಕಜೀವಿಗಳಿಗಾಗಿ ತನ್ನ ಅನುಯಾಯಿಗಳ ಬೆಂಬಲದೊಂದಿಗೆ ಟೊಂಕಕಟ್ಟಿ ಯೋಜನೆಗಳ ರೂಪಿಸಿ ಮಾನವ ಸಮಾನತೆಯ ಹೊಸ ಶಕೆ ನಿರ್ಮಿಸಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಬಿ.ಶ್ರೀಧರ ಅಮೀನ್ ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹಾಗೂ ರಾಜೇಶ್ ಪೂಂಜರೆಕೋಡಿ ನಿವಾಸದಲ್ಲಿ ಯುವವಾಹಿನಿ ಬಂಟ್ವಾಳ ವತಿಯಿಂದ ಗುರುತತ್ವವಾಹಿನಿ 23ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.
ಹಿರಿಯ ಖ್ಯಾತ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮಾತನಾಡಿದರು. ಸಂಗೀತ ವಾದಕ ರಾಜೇಶ್, ಯುವವಾಹಿನಿ ಬಂಟ್ವಾಳ ಘಟಕ ಉಪಾಧ್ಯಕ್ಷ ನಾರಾಯಣ, ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್, ಉದಯ್ ಮೆನಾಡು, ಲೋಹಿತ್ ಕನಪಾದೆ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ., ಸದಸ್ಯರಾದ, ಪ್ರಶಾಂತ್ ಏರಮಲೆ, ಯತೀಶ್, ಜಗನ್ನಾಥ್ ಸುವರ್ಣ, ಹರೀಶ್ ಸಾಲ್ಯಾನ್ ಅಜೆಕಲ, ಶೈಲೇಶ್, ಸುಲತಾ ಬಿ.ಸಿರೋಡ್, ನಯನಾ ಜಯಾ, ಜಗದೀಶ್ ತುಂಬೆ, ಜಯಾ, ಯಶೋಧರ ಕಡಂಬಳಿಕೆ, ಶೈಲಜಾ ರಾಜೇಶ್ ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಸ್ವಾಗತಿಸಿ, ವಂದಿಸಿದರು.