‘ದುಬಾರಿ’ಗೆ ಶ್ರೀಲೀಲಾ ... ಧ್ರುವಗೆ ನಾಯಕಿಯಾದ ‘ಕಿಸ್’ ಬೆಡಗಿ

Dubaari - Srileela
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಚಿತ್ರಕ್ಕೆ ಕೊನೆಗೂ ನಾಯಕಿಯ ಆಯ್ಕೆಯಾಗಿದೆ. ‘ಕಿಸ್’ ಬೆಡಗಿ ಶ್ರೀಲೀಲಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ನಂತರ ಶ್ರೀಲೀಲಾ ಯಾವುದೇ ಚಿತ್ರದಲ್ಲೂ ಅಭಿನಯಿಸಿಲ್ಲ. ಒಂದೆರೆಡು ಚಿತ್ರಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ, ಯಾವುದೇ ಚಿತ್ರ ಇದುವರೆಗೂ ಶುರುವಾಗಿರಲಿಲ್ಲ. ಇದೀಗ ಶ್ರೀಲೀಲಾ, ‘ದುಬಾರಿ’ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

‘ಪೊಗರು’ ಚಿತ್ರದ ಬಿಡುಗಡೆಗೆ ಕಾದಿರುವ ಧ್ರುವ ಸರ್ಜಾ, ಹೊಸ ಹೇರ್‌ಸ್ಟೈಲ್‌ನೊಂದಿಗೆ ‘ದುಬಾರಿ’ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಡಿಸೆಂಬರ್ ಮೂರನೇ ವಾರದಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಶುರುವಾಗಲಿದೆ. ನಂತರದ ದಿನಗಳಲ್ಲಿ ಮಂಡ್ಯ ಸೇರಿದಂತೆ ಬೇರೆ ಕಡೆ ಚಿತ್ರೀಕರಣ ನಡೆಯಲಿದೆ.

‘ದುಬಾರಿ’ ಚಿತ್ರಕ್ಕೆ ನಂದಕಿಶೋರ್, ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ರಾಪರ್​ ಚಂದನ್ ಶೆಟ್ಟಿ, ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net