

ಬೆಂಗಳೂರು: ನಾಡಿನಾದ್ಯಂತ ಆಗಸ್ಟ್ 26ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಬೆಣ್ಣೆ ಗೋಪಾಲನ ವಿಶೇಷ ಪೂಜೆ, ಬಾಲ ರೂಪದ ಶ್ರೀ ಕೃಷ್ಣನ ಆಚರಣೆಗಳೊಂದಿಗೆ, ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಭಗವಾನ್ ಕೃಷ್ಣನ ಜನ್ಮ ಸ್ಮರಣಾರ್ಥ, ಭಕ್ತರು ಮನೆಯಲ್ಲಿ ವಿವಿಧ ರೀತಿಯ ಸಿಹಿತಿಂಡಿಗಳನ್ನು ತಯಾರಿಸಿ, ಶ್ರೀಕೃಷ್ಣನಿಗೆ ಅರ್ಪಿಸುತ್ತಾರೆ.
ಇನ್ನೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಲವೆಡೆ ವೇಷಭೂಷಣ ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಶ್ರೀ ಕೃಷ್ಣ ಹಸುವಿನ ತುಪ್ಪದ ಕಂಪನಿ ವತಿಯಿಂದ ಕೃಷ್ಣ ವೇಷ-ಭೂಷಣ ಫೋಟೋ ಸ್ಫಧೆಯನ್ನು ಏರ್ಪಡಿಸಲಾಗಿದೆ.
ನಿಮ್ಮ ಮನೆಯಲ್ಲಿರುವ ಪುಟ್ಟ ಕಂದಮ್ಮನಿಗೆ ಕೃಷ್ಣ ಅಲಂಕಾರ ಮಾಡಿ ಅದರ ಚಿತ್ರಗಳನ್ನು 9035026822 ಸಂಖ್ಯೆಗೆ ವಾಟ್ಸ್ಆ್ಯಪ್ನಲ್ಲಿ ಕಳಿಸಬಹುದಾಗಿದೆ. ಭಾವಚಿತ್ರದ ಜೊತೆಗೆ ಮಗುವಿನ ಹೆಸರು, ಜನ್ಮ ದಿನಾಂಕ, ಊರು, ವಿಳಾಸವನ್ನು ಕಳುಹಸಿಬೇಕಾಗಿದೆ.