ಶ್ರೀ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕಿಗೆ 1.23 ಕೋಟಿ ಲಾಭ

vijaya sarathi
Published on

ಬೆಂಗಳೂರು: ಶ್ರೀ ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ 2024-25ನೇ ಸಾಲಿನಲ್ಲಿ 1.23 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.

ಬ್ಯಾಂಕ್ ಅಧ್ಯಕ್ಷ ಡಿ.ಆರ್. ವಿಜಯಸಾರಥಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ನಿವ್ವಳ ಲಾಭ ಹೆಚ್ಚಾಗುತ್ತಿದೆ. ಇದಕ್ಕೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಹಕರೇ ಕಾರಣ. ಮುಂದಿನ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಅನ್ನು ಡಿಜಿಟಲೀಕರಣಗೊಳಿಸಿ ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡಲಾಗುವುದು. ಮೊಬೈಲ್ ಬ್ಯಾಂಕಿಂಗ್ ಸೇವೆ ಜೊತೆಗೆ ಸಿಬ್ಬಂದಿಗೆ ಸ್ವಯಂನಿವೃತ್ತಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ಅಧಿಕಾರಿ, ಸಿಬ್ಬಂದಿ ಸದಸ್ಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಆಶಯದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸದಸ್ಯರ ಮಕ್ಕಳು ಅಂಗವಿಕಲರಾಗಿದ್ದರೆ ಅಂತಹವರಿಗೆ ಪಿಯುಸಿ, ಪದವಿ ವ್ಯಾಸಂಗಕ್ಕೆ ಆರ್ಥಿಕ ನೆರವು ಕಲ್ಪಿಸಲಾಗುವುದು. ವಿಮಾ ಪಾಲಿಸಿ ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ವಸತಿ ಯೋಜನೆ ಜಾರಿಗೆ ತರಲಾಗುವುದು. ಸದಸ್ಯರಿಗೆ ವೈದ್ಯಕೀಯ ಸಹಾಯಧನಕ್ಕೆ 10 ಸಾವಿರ ರೂ., 1 ಲಕ್ಷ ರೂ.ವರೆಗೆ ಅಪಘಾತ ವಿಮೆ, 5 ಸಾವಿರ ರೂ. ಮರಣೊತ್ತರ ಸಹಾಯಧನ ಮತ್ತು ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕ್‌ನ ಸಂಸ್ಥಾಪಕ ಡಾ.ಕೆ.ಎಂ. ರಂಗಧಾಮ ಶೆಟ್ಟಿ ನೇತೃತ್ವದಲ್ಲಿ ಏರ್ಪಡಿಸಿದ್ದ ಸರ್ವಸದಸ್ಯರ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಉಪಾಧ್ಯಕ್ಷ ಡಾ.ಎಂ. ರಂಗಧಾಮ ಶೆಟ್ಟಿ, ನಿರ್ದೇಶಕರಾದ ಬಿ.ಎಲ್. ವೆಂಕಟಾಚಲಪತಿ, ಪಿ. ರುದ್ರಮೂರ್ತಿ, ನಾಗಭೂಷಣ್, ಸತ್ಯಮೂರ್ತಿ, ಎಂ.ಸಿ. ಫಾಲನೇತ್ರ, ಜಿ. ಲೋಹಿತ್. ನಂಜೇಗೌಡ, ಪಿ.ಕೆ. ರವೀಂದ್ರ, ಎನ್. ಮಹಾಲಕ್ಷ್ಮೀ, ಎಚ್. ಮಾರುತಿ, ಅನ್ನಪೂರ್ಣಮ್ಮ, ಎಸ್.ರಚನಾ, ಜಯಲಕ್ಷ್ಮೀ, ತೋಟಗೇರ. ಪ್ರಭಾರ ಪ್ರಧಾನ ವ್ಯವಸ್ಥಾಪಕ ಕೆ.ಎನ್. ಕೃಷ್ಣಯ್ಯ ಶೆಟ್ಟಿ, ಸಲಹೆಗಾರ ಬಿ.ಆರ್. ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net