

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇಗುಲದಲ್ಲಿ ಶ್ರೀ ಲಕ್ಷ್ಮೀ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಅಂಗವಾಗಿ ಬೆಳಗ್ಗೆ ಶ್ರೀದೇವಿಗೆ ಕುಂಕುಮಾರ್ಚನೆ, ಮಧ್ಯಾಹ್ನ ಪೂಜೆ, ಸಂಜೆ ರಾಮನಾಮ ಜಪ ಅಭಿಯಾನ, ರಾತ್ರಿ ದೇಗುಲದ ಭಜನಾ ಮಂಡಳಿಯಿಂದ ವಿಶೇಷ ಭಜನಾ ಸೇವೆ ಏಕಾಂತ ಸೇವೆ ವಿಧಿವಿಧಾನ ನಡೆಯಿತು.
ಮುಖ್ಯ ಅರ್ಚಕರಾದ ರವೀಂದ್ರ ಭಟ್, ಶ್ರೀಧರ ಭಟ್, ಸಂದೀಪ್ ಭಟ್ ವಿಧಿವಿಧಾನ ನಡೆಸಿಕೊಟ್ಟರು. ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು, ಕೆ.ಮಂಜುನಾಥ ನಾಯಕ್ ಸಹಕರಿಸಿದರು.
ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ಡಾ.ರತ್ನಾಕರ ಶೆಣೈ, ಪಿ.ದೇವಿದಾಸ ಭಟ್, ಕೆ.ಅನಂತರಾಯ ಕಿಣಿ ಪ್ರಮುಖರಾದ ಉಜಿರೆ ಪ್ರಭಾತ್ ಭಟ್, ಕೆ.ಕೃಷ್ಣ ಭಟ್, ಪಿ.ಪ್ರಸಾದ್ ಶೆಣೈ, ಎನ್.ಸುರೇಶ್ ಪೈ, ವೈ.ಅನಂತ ಶೆಣೈ, ಪಿ.ಹರೀಶ ಪೈ, ಎಚ್.ರಾವೇಂದ್ರ ಪ್ರಭು, ಕರಾಯ ರಾವೇಂದ್ರ ನಾಯಕ್, ಯು.ರಾಜೇಶ ಪೈ, ಕೆ.ದಾಮೋದರ ಪ್ರಭು, ಸಂತೋಷ್ ಕಾಮತ್, ಶಾಂತಾರಾಮ ಶೆಣೈ, ಜಯಂತ ನಾಯಕ್, ಪೂಜಾ ಆರ್.ಪ್ರಭು, ರಾಜೇಂದ್ರ ಭಟ್, ವಿವೇಕಾನಂದ ಪ್ರಭು ಮತ್ತಿತರರಿದ್ದರು.