

ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘ ನೇತೃತ್ವದೊಂದಿಗೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಆಯೋಜನೆಗೊಂಡಿತು.
ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಶಂಕರ ಡಿ. ಉದ್ಘಾಟಿಸಿದರು. 2024-25ರ ಎಸ್ಸೆಸ್ಸೆಲ್ಸಿ ಹಾಗೂ ಪ್ಲಸ್ ಟುವಿನಲ್ಲಿ ಅತ್ಯುತ್ತಮ ಅಂಕ ಪಡೆದ ಕಿಶನ್‌ರಾಜ್ ಕೆ.ಕೆ, ಧನ್ಯಶ್ರೀ ಎ.ಕೆ., ಜ್ಯೋತಿಕಾ ಮಜೀರ್‌ಪಳ್ಳಕಟ್ಟೆ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಸಂತ ಅಜಕೊಡು, ರಾಮ ಪಟ್ಟಾಜೆ, ಬಾಬು ಬಂದ್ಯೋಡ್, ರಾಮಪ್ಪ ಎಂ.ಪಿ., ಕೃಷ್ಣದಾಸ್ ಡಿ, ರವಿ ಕೆ., ಚಂದಪ್ಪ ಕಕ್ವೆ, ಅಂಗಾರ ಅಜಕೋಡ್, ಸುಂದರ ಸುದೆಂಬಳ, ಗಂಗಾಧರ ಗೋಳಿಯಡ್ಕ, ವಿನೋದ್ ಬೇಪು, ಶೋಭಾ, ನಾಗವೇಣಿ, ಕೃಷ್ಣ ಕಜಂಪಾಡಿ, ಆನಂದ ಕಾಟಿಪಳ್ಳ ಉಪಸ್ಥಿತರಿದ್ದರು. ಗೋಪಾಲ ಡಿ. ಸ್ವಾಗತಿಸಿದರು. ಸುಧಾಕರ ಬೆಳ್ಳಿಗೆ ವಂದಿಸಿದರು. ಬಳಿಕ ಬದಿಯಡ್ಕ ಪಂಚಾಯಿತಿ ಮೊಗೇರ ಸಮಿತಿ ರಚಿಸಲಾಯಿತು.