

ಉಪ್ಪಿನಂಗಡಿ: ಶ್ರೀಕೃಷ್ಣನ ಜೀವನ ಸಂದೇಶ ಸರ್ವ ಕಾಲಕ್ಕೂ ಸರ್ವ ಜನಾಂಗಕ್ಕೂ ಪಾಲನಾ ಯೋಗ್ಯವಾಗಿದೆ. ವ್ಯಕ್ತಿಯ ಬದುಕಿನಲ್ಲಿ ಬರುವ ಪ್ರತಿಯೊಂದು ಸಂತಸ, ಸಂಕಷ್ಟದಲ್ಲಿ ಕೃಷ್ಣನ ಉಪದೇಶ ಬದುಕಿನ ಪ್ರಜ್ವಲತೆಗೆ ಕಾರಣವಾಗುತ್ತದೆ ಎಂದು ಉದ್ಯಮಿ ಹೇರಂಭ ಶಾಸ್ತ್ರಿ ಹೇಳಿದರು.
ಉಪ್ಪಿನಂಗಡಿ ಮಾಧವಶಿಶು ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಎನ್.ಉಮೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶಿಶು ಮಂದಿರ ಅಧ್ಯಕ್ಷ ಮನೋಜ್ ಶೆಟ್ಟಿ, ಪಾಲಕರ ಸಂಘದ ಉಪಾಧ್ಯಕ್ಷೆ ಮಮತಾ ಶ್ರೀರ್, ಆಡಳಿತ ಮಂಡಳಿ ಸದಸ್ಯ ಕಂಗ್ವೆ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಹರಿರಾಮಚಂದ್ರ, ಜಯಶ್ರೀ ಜನಾರ್ದನ್, ಸುಜಾತಕೃಷ್ಣ ಆಚಾರ್ಯ, ಯು.ರಾಜೇಶ್ ಪೈ, ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಸುಧಾಕರ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಜ್ಯೋತಿ ಹೇರಂಭ ಶಾಸ್ತ್ರಿ, ಉಷಾ ಮುಳೀಯ, ಧನಂಜಯ್ ನಟ್ಟಿಬೈಲ್, ಸುನೀಲ್ ಸಂಗಮ್, ಕಿರಣ್ ಹರಿನಗರ, ರಾಜು ಅಲಗುರಿಮಜಲು, ರಾಜೇಶ್ ಕುಕ್ಕೆಶ್ರೀ ಇದ್ದರು.
ದಿನೇಶ್ ಹಾಗೂ ವಿದ್ಯಾಶ್ರೀ ದಂಪತಿಯ ಮಗು ಲಿಯಾನ್ಶ್‌ನನ್ನು ಬಾಲಕೃಷ್ಣನಾಗಿ ತೊಟ್ಟಿಲು ತೂಗಲಾಯಿತು. ಸುಕನ್ಯಾ ಸ್ವಾಗತಿಸಿದರು. ಲತಾಶ್ರೀ ವಂದಿಸಿದರು. ಆರತಿ ಕಾರ್ಯಕ್ರಮ ನಿರೂಪಿಸಿದರು.