

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 37ನೇ ವರ್ಷದ ಗಣೇಶೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಳಂಜ ಶಾಲಾ ಮಕ್ಕಳು ನಗದು ಬಹುಮಾನ ಪಡೆದಿದ್ದು, ಆ ಹಣದಲ್ಲಿ ಶಾಲೆಗೆ ಲೈಟ್ ಖರೀದಿಸಿ ನೀಡಿದ್ದಾರೆ.
8ರಿಂದ 10ನೇ ತರಗತಿ ಪ್ರಥಮ ಸ್ಥಾನ, 5ರಿಂದ 7ನೇ ತರಗತಿ ದ್ವಿತೀಯ ಹಾಗೂ 1ರಿಂದ ನಾಲ್ಕನೇ ತರಗತಿ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿ ಬಹುಮಾನ ಪಡೆದಿದ್ದರು.
ವಿಜೇತ ವಿದ್ಯಾರ್ಥಿಗಳು, ಪಾಲಕರು ಹಾಗೂ ತರಬೇತಿ ನೀಡಿದ ಶಾಲಾ ಶಿಕ್ಷಕಿಯರಾದ ಜೀವಿತಾ, ಪ್ರತೀಕ್ಷಾ ತಂಡಗಳಿಗೆ ಬಂದ ನಗದು ಬಹುಮಾನದಲ್ಲಿ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳನ್ನು ಖರೀದಿಸಿದ್ದು, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗಸ್ವಾಮಿ ಸಿ.ಆರ್ ಅವರಿಗೆ ಹಸ್ತಾಂತರಿಸಿದರು.