ಐಪಿಎಲ್​ ಬಿಟ್ಟು ಮಾಲ್ಡೀವ್ಸ್​ಗೆ ಹಾರಿದ SRH​ ತಂಡ! ಇದರ ಹಿಂದಿರೋ ಕಾವ್ಯಾ ಮಾರನ್ ಮಾಸ್ಟರ್ ಪ್ಲಾನ್​ ಏನು?

SRH

SRH : ಕಳೆದ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಸನ್‌ರೈಸರ್ಸ್ ಹೈದರಾಬಾದ್ ( SRH ) ತಂಡ ಪ್ರಸಕ್ತ ಸೀಸನ್​ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ತೋರುತ್ತಿಲ್ಲ. ಟೂರ್ನಿ ಆರಂಭವಾಗುವ ಮೊದಲು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಎಸ್‌ಆರ್‌ಎಚ್ ತಂಡ, ಇದೀಗ ಕನಿಷ್ಠ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಹೆಣಗಾಡುತ್ತಿದೆ.

ಈ ಸೀಸನ್​ನಲ್ಲಿ ಇಲ್ಲಿಯವರೆಗೆ 9 ಪಂದ್ಯಗಳನ್ನು ಆಡಿರುವ ಪ್ಯಾಟ್​ ಕಮಿನ್ಸ್​ ಪಡೆ, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದ್ದು, 6 ಪಂದ್ಯಗಳನ್ನು ಸೋತಿದೆ. ಎಸ್​ಆರ್​ಎಚ್​ ತಂಡ 6 ಅಂಕಗಳು ಮತ್ತು -1.103 ನೆಟ್​ ರನ್​ ರೇಟ್​ನೊಂದಿಗೆ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಪ್ರಸಕ್ತ ಐಪಿಎಲ್​ನಲ್ಲಿ ಭಾರಿ ಸಂಕಷ್ಟದಲ್ಲಿರುವ ಸಮಯದಲ್ಲೇ ಸನ್‌ರೈಸರ್ಸ್ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಎಸ್​ಆರ್​ಎಚ್​ ಮ್ಯಾನೇಜ್​ಮೆಂಟ್​ ಮಾಲ್ಡೀವ್ಸ್‌ಗೆ ಕಳುಹಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿನ ನಂತರ, ಇಡೀ ತಂಡವನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ. ಆಟಗಾರರು ಮಾಲ್ಡೀವ್ಸ್‌ಗೆ ಬಂದಿಳಿಯುವ ವಿಡಿಯೋವನ್ನು ಎಸ್​ಆರ್​ಎಚ್​ ತಂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.

ಹೈದರಾಬಾದ್ ತಂಡವು ತಮ್ಮ ಮುಂದಿನ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಪಂದ್ಯವು ಮೇ 2ರ ಶುಕ್ರವಾರ ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಸ್​ಆರ್​ಎಚ್​ ತಂಡವು ಮಾಲ್ಡೀವ್ಸ್ ಪ್ರವಾಸವನ್ನು ಪೂರ್ಣಗೊಳಿಸಿದ ನಂತರ ಏಪ್ರಿಲ್ 30 ಅಥವಾ ಮೇ 1 ರಂದು ಭಾರತಕ್ಕೆ ಮರಳುವ ಸಾಧ್ಯತೆಯಿದೆ.

ಇದನ್ನೂ ಓದಿ: 3267 ದಿನಗಳ ಬಳಿಕ ಅರ್ಧ ಶತಕ: ಈ ಅದ್ಭುತ ಆಟಕ್ಕೆ ಕಾರಣ ಯಾರು ಅಂತ ಹೇಳಿದ ಕೃನಾಲ್​ ಪಾಂಡ್ಯ! Krunal Pandya

ಈ ಸಮಯದಲ್ಲಿ ಮಾಲ್ಡೀವ್ಸ್​ ಟ್ರಿಪ್​ ಏಕೆ?

ಈ ಸೀಸನ್​ನ ಮಧ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು ಮಾಲ್ಡೀವ್ಸ್‌ಗೆ ಕಳುಹಿಸಿರುವುದರ ಹಿಂದೆ ಒಂದು ಕಾರಣವಿದೆ ಎಂದು ಹೇಳಲಾಗುತ್ತಿದೆ. ಈ ಪ್ರವಾಸವು ಆಟಗಾರರಿಗೆ ವಿಶ್ರಾಂತಿ ನೀಡುವುದಲ್ಲದೆ, ಹೊಸ ಉತ್ಸಾಹವನ್ನು ತರುತ್ತದೆ ಎಂದು ಸನ್‌ರೈಸರ್ಸ್ ಆಡಳಿತ ಮಂಡಳಿ ನಂಬಿದೆ. ಈ ಪ್ರವಾಸದ ನಂತರ ಪ್ರಮುಖ ಪಂದ್ಯಗಳು ನಡೆಯುವುದರಿಂದ, ಆಟಗಾರರು ಈ ಪಂದ್ಯಗಳಲ್ಲಿ ಹೊಸ ಉತ್ಸಾಹದಿಂದ ಮೈದಾನಕ್ಕೆ ಇಳಿದು ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಾರೆ ಎಂದು ಆಡಳಿತ ಮಂಡಳಿ ನಂಬಿದೆ. ಸನ್‌ರೈಸರ್ಸ್ ತಂಡ ಅಭ್ಯಾಸವನ್ನು ತಪ್ಪಿಸಿ, ಸದ್ಯ ತೆಗೆದುಕೊಂಡಿರುವ ಈ ನಿರ್ಧಾರವು ಎಷ್ಟರ ಮಟ್ಟಿಗೆ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಸೀಸನ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್​ ಇನ್ನೂ 5 ಪಂದ್ಯಗಳನ್ನು ಆಡಲಿದೆ. ಸನ್‌ರೈಸರ್ಸ್ ಎಲ್ಲ ಐದು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವಿದೆ. ತಂಡವು ಪ್ರಸ್ತುತ ಮೈನಸ್ ನೆಟ್ ರನ್ ರೇಟ್‌ನಲ್ಲಿರುವ ಕಾರಣ, ಸನ್‌ರೈಸರ್ಸ್ ಎಲ್ಲ ಐದು ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದು ತಮ್ಮ ನೆಟ್​ ರನ್ ರೇಟ್ ಅನ್ನು ಸಾಧ್ಯವಾದಷ್ಟು ಸುಧಾರಿಸಿಕೊಳ್ಳಬೇಕಿದೆ. ಹೀಗಿದ್ದಲ್ಲಿ ಮಾತ್ರ ಪ್ಲೇ ಆಫ್​ಗೆ ಹೋಗುವ ಸಾಧ್ಯತೆ ಇದೆ. (ಏಜೆನ್ಸೀಸ್​)

3267 ದಿನಗಳ ಬಳಿಕ ಅರ್ಧ ಶತಕ: ಈ ಅದ್ಭುತ ಆಟಕ್ಕೆ ಕಾರಣ ಯಾರು ಅಂತ ಹೇಳಿದ ಕೃನಾಲ್​ ಪಾಂಡ್ಯ! Krunal Pandya

ಈವರೆಗೆ 13 ಲಕ್ಷ ಹೋಟೆಲ್​ ಬುಕಿಂಗ್​ ರದ್ದು… ಪಹಲ್ಗಾಮ್ ಉಗ್ರ​ ದಾಳಿಯಿಂದ ಕಾಶ್ಮೀರ ಟೂರಿಸಂಗೆ ಭಾರೀ ನಷ್ಟ! Jammu Kashmir Tourism

Share This Article

ಮಕ್ಕಳು ಪ್ರತಿದಿನ ತಿನ್ನಲೇ ಬೇಕಾದ ಹಣ್ಣುಗಳಿವು..ಕಾರಣ ಹೀಗಿದೆ | Fruits

Fruits: ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಹಣ್ಣುಗಳು ಬಹಳ ಪ್ರಯೋಜನಕಾರಿ. ಹಣ್ಣುಗಳಲ್ಲಿ…

ನೀವು ಕೂಡ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈರುಳ್ಳಿ ತಿನ್ನಲೇಬೇಡಿ.. onion

onion : ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.…

ನೀವು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತೀರಾ? ಹುಷಾರಾಗಿರಿ.. heels

heels : ಮಹಿಳೆಯರು ತಮ್ಮ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಹೈ ಹೀಲ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು…