VIDEO | ಚಾಹಲ್-ಧನಶ್ರೀ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಿಟ್ಟಾದ ಕ್ರಿಸ್ ಗೇಲ್!

chahal gayle dhana
Published on

ಬೆಂಗಳೂರು: ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಭಾವಿ ಪತ್ನಿ ಹಾಗೂ ಕೋರಿಯೋಗ್ರಾರ್ ಧನಶ್ರೀ ವರ್ಮ ಜತೆಗೂಡಿ ಲಿಪ್-ಸಿಂಕ್ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಗುರುವಾರ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಆರ್‌ಸಿಬಿಯ ಮಾಜಿ ಸಹ-ಆಟಗಾರ ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಹುಸಿಕೋಪದೊಂದಿಗೆ ಕಮೆಂಟ್ ಹಾಕಿ ಸುದ್ದಿಯಾಗಿದ್ದಾರೆ.

ಜನಪ್ರಿಯ ‘ರಸೋದೆ ಮೇ ಕೌನ್ ಥಾ’ ಹಾಡಿನ ಕೋಕಿಲಬೆನ್ ಡೈಲಾಗ್‌ಗೆ ಚಾಹಲ್ ಲಿಪ್-ಸಿಂಕ್ ಮಾಡಿ ಗಮನಸೆಳೆದಿದ್ದರೆ, ವಿಡಿಯೋದಲ್ಲಿ ಅವರಿಗೆ ಸಾಥ್ ನೀಡಿರುವ ಭಾವಿ ಪತ್ನಿ ಧನಶ್ರೀ ವರ್ಮ, ಭಾವಾಭಿನಯದ ಜತೆಗೆ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಈ ವಿಡಿಯೋ ಗುರುವಾರ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲು ಸಜ್ಜಾಗುತ್ತಿರುವ ಕ್ರಿಸ್ ಗೇಲ್ ಕೂಡ ಈ ಪೋಸ್ಟ್‌ಗೆ ಕಮೆಂಟ್ ಹಾಕಿದ್ದಾರೆ.

‘ಓಕೆ ಚಾಹಲ್, ನನಗೆ ಇನ್ನು ಸಾಕಾಯಿತು. ನಿನ್ನ ಇನ್‌ಸ್ಟಾಗ್ರಾಂ ಪೇಜ್‌ನ ಬಗ್ಗೆ ನಾನೀಗ ದೂರು ನೀಡಲಿದ್ದೇನೆ’ ಎಂದು ಕ್ರಿಸ್ ಗೇಲ್ ಬರೆದಿದ್ದು, ಜತೆಗೆ ನಗುವಿನ ಇಮೋಜಿ ಕೂಡ ಪ್ರಕಟಿಸುವ ಮೂಲಕ, ನಾನು ಹಾಕಿರುವ ಕಮೆಂಟ್ ತಮಾಷೆಗಾಗಿ ಎಂದು ಸಾರಿದ್ದಾರೆ.

ಈ ಮುನ್ನ ಲಾಕ್‌ಡೌನ್ ಸಮಯದಲ್ಲಿ ಚಾಹಲ್ ಹಾಕಿದ್ದ ಕೆಲ ತಮಾಷೆಯ ಟಿಕ್‌ಟಾಕ್ ವಿಡಿಯೋಗಳಿಗೂ ಹುಸಿಕೋಪ ತೋರಿದ್ದ ಗೇಲ್, ನಿನ್ನನ್ನು ಬ್ಲಾಕ್ ಮಾಡುವುದಾಗಿ ಹುಸಿಕೋಪದೊಂದಿಗೆ ಗದರಿದ್ದರು.

30 ವರ್ಷದ ಚಾಹಲ್ ಐಪಿಎಲ್‌ಗಾಗಿ ಯುಎಇಗೆ ತೆರಳುವುದಕ್ಕೆ ಮುನ್ನ ಆಗಸ್ಟ್ 8ರಂದು ದಂತವೈದ್ಯೆಯೂ ಆಗಿರುವ ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಯುಟ್ಯೂಬರ್ ಕೂಡ ಆಗಿರುವ ಧನಶ್ರೀ ವರ್ಮ ಅವರೂ, ಇನ್‌ಸ್ಟಾಗ್ರಾಂನಲ್ಲಿ ವಿವಿಧ ಡ್ಯಾನ್ಸ್ ವಿಡಿಯೋಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದು, ಇತ್ತೀಚೆಗೆ 1 ದಶಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net