ಟಿ-20 ವಿಶ್ವಕಪ್​ನಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್​​ಗೇರುವುದು ಖಚಿತ: ಯುವರಾಜ್​ ಸಿಂಗ್

yuvraj singh
Published on

ನವದೆಹಲಿ: ಜೂನ್​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು, ಬಹುತೇಕ ತಂಡಗಳು 15 ಸದಸ್ಯರ ಟೀಮ್​ಅನ್ನು ಘೋಷಿಸಿದೆ. ಇನ್ನೂ ಟೂರ್ನಿ ಆರಂಭಕ್ಕೂ ಕೆಲವೇ ದಿನಗಳ ಬಾಕಿ ಇರುವ ಹೊತ್ತಿನಲ್ಲಿ ಟೀಮ್​ ಇಂಡಿಯಾ ಮಾಜಿ ಆಟಗಾರ ಚುಟುಕು ವಿಶ್ವಸಮರದಲ್ಲಿ ಸೆಮಿಫೈನಲ್​ಗೇರುವ 4 ತಂಡಗಳನ್ನು ಹೆಸರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಜೂನ್​ 01ರಿಂದ ಶುರುವಾಗಲಿರುವ ಟೂರ್ನಿಯ ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ. ಇನ್ನೂ ಈ ನಡುವೆ ಟಿ-20 ವಿಶ್ವಕಪ್​ ರಾಯಭಾರಿ, ಟೀಮ್​ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್​ ಟಿ-20 ವಿಶ್ವಕಪ್​ನಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ತಂಡಗಳನ್ನು ಹೆಸರಿಸಿದ್ದಾರೆ.

T-20 World Cup

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಯುವರಾಜ್​, ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್​ಗೇರುವ ಹಾಟ್​ ಫೇವರಿಟ್​ ತಂಡಗಳಾಗಿವೆ. ಅಲ್ಲದೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಗುರುತಿಸಿಕೊಂಡಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ನಾನು ಹೆಸರಿಸಿರುವ ಈ ನಾಲ್ಕು ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿವೆ. ಏಕೆಂದರೆ ಟಿ-20 ಕ್ರಿಕೆಟ್​ ವಿಚಾರಕ್ಕೆ ಬರುವುದಾದರೆ ಈ ನಾಲ್ಕು ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಹೀಗಾಗಿ ಈ ನಾಲ್ಕು ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಟಿ-20 ವಿಶ್ವಕಪ್​ ರಾಯಭಾರಿ ಯುವರಾಜ್​ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net