

ನವದೆಹಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 7ನೇ ಬೌಲರ್ ಎನಿಸಿಕೊಂಡ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರನ್ನು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಲೆಜೆಂಡ್ ಎಂದು ಕರೆದಿದ್ದಾರೆ. 13 ವರ್ಷಗಳ ಹಿಂದೆ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ನ ಆರು ಎಸೆತಗಳಲ್ಲೂ ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ‘ಸ್ಟುವರ್ಟ್ ಬ್ರಾಡ್ ಸಾಧನೆಯನ್ನು ಕೊಂಡಾಡಿರುವ ಯುವಿ, ಕಠಿಣ ಶ್ರಮವೇ ನಿಮ್ಮ ಸಾಧನೆಗೆ ಕಾರಣ. ನನ್ನ ಮತ್ತು ಬ್ರಾಡ್ ನೆನೆಸಿಕೊಂಡರೆ ಎಲ್ಲರೂ 6 ಸಿಕ್ಸರ್‌ಗಳನ್ನೇ ಮೆಲುಕು ಹಾಕುತ್ತಾರೆ. ನನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಪ್ರತಿಯೊಬ್ಬರು ಬ್ರಾಡ್ ಸಾಧನೆಯನ್ನು ಶ್ಲಾಸಿ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಬ್ರಾಡಿ ಯುಆರ್ ಎ ಲೆಜೆಂಡ್, ಹ್ಯಾಟ್ಸ್ ಆ್ ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆಗಸ್ಟ್ 2 ರಂದು ಐಪಿಎಲ್ ಆಡಳಿತ ಮಂಡಳಿ ಸಭೆ
ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ, ನಿವೃತ್ತಿ ಜೀವನ ಎಂಜಾಯ್ ಮಾಡಿ ಎಂದು ಬ್ರಾಡ್ ಟ್ವೀಟ್ ಮಾಡಿದ್ದರು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 7ನೇ ಹಾಗೂ ಇಂಗ್ಲೆಂಡ್‌ನ 2ನೇ ಬೌಲರ್ ಎನಿಸಿಕೊಂಡಿದ್ದಾರೆ.