

Abhishek Sharma: ನಿನ್ನೆ (ಮೇ.24) ಲಖನೌದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಎಸ್ಆರ್ಎಚ್ 42 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ತಂಡ ಗೆದ್ದಿದ್ದೇ ಆದರೂ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲರಾದರು.
ಆರ್ಸಿಬಿ ಎದುರು ಅಬ್ಬರದ ಬ್ಯಾಟಿಂಗ್ ನಡೆಸುವಲ್ಲಿ ಎಡವಿದ ಅಭಿಷೇಕ್ ಶರ್ಮ, ಕೇವಲ 34 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಉತ್ತಮ ಇನ್ನಿಂಗ್ಸ್ ನೀಡಲಿಲ್ಲ ಎಂಬ ವಿಷಯಕ್ಕೆ ಅಭಿಷೇಕ್ ಗುರುಗಳಾದ ಯುವರಾಜ್ ಸಿಂಗ್ ಬೇಸರಗೊಳ್ಳಬಾರದು ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.
"ಅಭಿಷೇಕ್ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಬೇಸರಗೊಳ್ಳುವ ಅಗತ್ಯವಿಲ್ಲ. ಈ ಟೂರ್ನಿ ಪೂರ ಅವರು ಅದ್ಭುತ ಇನ್ನಿಂಗ್ಸ್ ನೀಡಿದ್ದಾರೆ. ಇಲ್ಲಿ ಅವರು ತಮ್ಮ ಕೋಚ್ ಮತ್ತು ಮೆಂಟರ್ ಅನ್ನು ಎಲ್ಲಾ ರೀತಿಯಲ್ಲಿಯೂ ಖುಷಿ ಪಡಿಸಲು ಸಾಧ್ಯವಿಲ್ಲ" ಎಂದು ಕ್ರಿಕೆಟ್ ಚರ್ಚೆ ವೇಳೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಬಾ ಕರೀಮ್, "ಅಭಿಷೇಕ್ ಶರ್ಮ ಬಹಳ ಪ್ರತಿಭಾವಂತ ಆಟಗಾರ. ತಮ್ಮ ಕಾಲದಲ್ಲಿ ಯುವಿ ದೈತ್ಯ ಪ್ರತಿಭೆ. ಅಭಿಷೇಕ್ ಎಲ್ಲ ಫಾರ್ಮೆಟ್ನಲ್ಲಿಯೂ ಆಡುವಂತ ಆಟಗಾರನಾಗಿ ಶೀಘ್ರವೇ ಹೊರಹೊಮ್ಮಲಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶರ್ಮ ಮತ್ತು ಯುವಿ ಕೂಡ ಕೆಲಸ ಮಾಡುತ್ತಿರಬಹುದು ಎಂದಿದ್ದಾರೆ,(ಏಜೆನ್ಸೀಸ್).