

Sandeep Patil: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಕೆಲಸದ ಹೊರೆ ನೀತಿಗಳ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಆಯ್ಕೆದಾರರ ಮಾಜಿ ಅಧ್ಯಕ್ಷ ಸಂದೀಪ್ ಪಾಟೀಲ್,ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
1983 ರ ವಿಶ್ವಕಪ್ ವಿಜೇತ ಭಾರತದ ತಂಡದ ಭಾಗವಾಗಿದ್ದ 68 ವರ್ಷದ ಪಾಟೀಲ್, ತಮ್ಮ ಆಟದ ದಿನಗಳಲ್ಲಿ ಮತ್ತು ಕ್ರಿಕೆಟ್ ಮಂಡಳಿಯಲ್ಲಿನ ಅಧಿಕಾರಾವಧಿಯಲ್ಲಿ ಇಂತಹ ಕ್ರಮಗಳನ್ನು ಎಂದಿಗೂ ಪರಿಗಣಿಸುತ್ತಿರಲಿಲ್ಲ ಎಂದರು.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಬುಮ್ರಾ ಎಲ್ಲಾ ಐದು ಪಂದ್ಯಗಳಲ್ಲಿಯೂ ಆಡಿದ್ದರು, ಅದರ ನಂತರ ಗಾಯಕ್ಕೆ ತುತ್ತಾದರು. ಇದು ಹೆಚ್ಚಿನ ಕೆಲಸದ ಹೊರೆಯ ಪರಿಣಾಮ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.ಇದನ್ನು ಅಲ್ಲಗೆಳೆದಿರುವ ಪಾಟೀಲ್, ಪ್ರಮುಖ ಸರಣಿಗಳಲ್ಲಿ ಮುಖ್ಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಸರಿಯಾದ ವಿಧಾನವಲ್ಲ ಎಂದು ಹೇಳಿದರು.
ಬಿಸಿಸಿಐ ಇದನ್ನೆಲ್ಲಾ ಹೇಗೆ ಒಪ್ಪುತ್ತಿದೆ ಎಂದು ಆಶ್ಚರ್ಯವಾಗುತ್ತಿದೆ ಎಂದಿರುವ ಅವರು, ನಾಯಕನಿಗಿಂತ, ಮುಖ್ಯ ತರಬೇತುದಾರನಿಗಿಂತ ಭೌತಚಿಕಿತ್ಸಕನ ಮಾತೇ ಮುಖ್ಯವೇ?. ಭೌತಚಿಕಿತ್ಸಕರು ಈಗ ಆಯ್ಕೆ ಸಮಿತಿ ಸಭೆಗಳಲ್ಲಿ ಕುಳಿತುಕೊಳ್ಳುತ್ತಾರೆಂದು ನಾವು ನಿರೀಕ್ಷಿಸಬೇಕೇ? ಅವರು ಯಾರು ಆಡಬೇಕು ಯಾರು ಆಡಬಾರದೆಂದು ನಿರ್ಧರಿಸುತ್ತಾರೆಯೇ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ನುಲಿಯ ಚಂದಯ್ಯ ಶ್ರೇಷ್ಠ ವಚನಕಾರ
ಯಾವುದೇ ಒಬ್ಬ ಆಟಗಾರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ಆತ ಯೋಧನಿದ್ದಂತೆ, ಆಗ ದೇಶಕ್ಕೊಸ್ಕರ ಸಾಯಲು ಸಿದ್ಧರಿರಬೇಕು ಎಂದರು.ಈ ಹಿಂದೆ ಸುನಿಲ್ ಗವಾಸ್ಕರ್ ಪಂದ್ಯದ ಐದು ದಿನಗಳಲ್ಲೂ ಬ್ಯಾಟಿಂಗ್ ಮಾಡುತಿದ್ದರು, ಕಪಿಲ್ ದೇವ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಅಷ್ಟೆ ಅಲ್ಲದೇ ಬೌಲಿಂಗ್ ಕೂಡ ಮಾಡುವುದನ್ನು ನಾನು ನೋಡಿದ್ದೇನೆ, ಅವರು ಎಂದಿಗೂ ವಿರಾಮಗಳನ್ನು ಕೇಳಲಿಲ್ಲ, ಎಂದಿಗೂ ದೂರು ನೀಡಲಿಲ್ಲ ಮತ್ತು ಅವರ ವೃತ್ತಿಜೀವನವು 16 ವರ್ಷಗಳಿಗಿಂತ ಹೆಚ್ಚು ಕಾಲ ವಿಸ್ತರಿಸಿತು. 1981 ರಲ್ಲಿ ಆಸ್ಟ್ರೇಲಿಯಾದಲ್ಲಿ ನನ್ನ ತಲೆಗೆ ಗಾಯವಾದ ನಂತರ ನಾನು ಮುಂದಿನ ಟೆಸ್ಟ್ ಅನ್ನು ತಪ್ಪಿಸಿಕೊಳ್ಳಲಿಲ್ಲ ಎಂದು ತಂಡದ ಬಗೆಗಿನ ಬದ್ಧತೆಯ ಪಾಠ ಮಾಡಿದರು.
ಆಧುನಿಕ ಆಟಗಾರರು ಉತ್ತಮ ಸೌಲಭ್ಯಗಳು ಮತ್ತು ವೈದ್ಯಕೀಯ ಬೆಂಬಲದಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಆದರೆ ಹಿಂದಿನ ತಲೆಮಾರುಗಳು ತಂಡಕ್ಕಾಗಿ ಕಷ್ಟಗಳನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದರು ಎಂದು ತಿಳಿಸಿದರು.(ಏಜೆನ್ಸೀಸ್)