ನೀವು ಯಾವ ರೀತಿಯಲ್ಲೂ ಯೋಗ್ಯರಲ್ಲ; ಪಾಕ್​ಗೆ ಜಾಡಿಸಿದ ಟೀಮ್​ ಇಂಡಿಯಾ ಮಾಜಿ ಆಟಗಾರ

Pakistan Cricket Team
Published on

ನವದೆಹಲಿ: ಈ ಬಾರಿಯ ಚುಟುಕು ವಿಶ್ವಸಮರವನ್ನು ಗೆದ್ದು ಕ್ರೀಡಾ ಲೋಕದಲ್ಲಿ ಹೊಸ ಸಂದೇಶವನ್ನು ರವಾನಿಸುವ ಉಮೇದಿನಲ್ಲಿದ್ದ ಪಾಕಿಸ್ತಾನ ಕ್ರಿಕೆಟ್​ ತಂಡ ತನ್ನ ಹೀನಾಯ ಪ್ರದರ್ಶನದಿಂದಾಗಿ ಸೋಲಿನ ಸರಪಳಿಯನ್ನು ಕಳಚಲಾಗದೆ ಈ ಬಾರಿಯ ಟಿ-20 ವಿಶ್ವಕಪ್​ ಅಭಿಯಾನವನ್ನು ಮುಗಿಸಿದೆ. ಇನ್ನೂ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳಲು ಐಸಿಸಿ ಹಾಗೂ ಬಿಸಿಸಿಐ ನಡೆಸಿದ ಪಿತೂರಿಯೇ ಕಾರಣ ಎಂದು ಅಲ್ಲಿನ ಅಭಿಮಾನಿಗಳು ದೂರಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ನೀವು ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಯೋಗ್ಯರಲ್ಲ. ನಿಮಗೆ ಆ ಯೋಗ್ಯತೆ ಇರಲಿಲ್ಲ ಎಂದು ಕಿಡಿಕಾರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

Virender Sehwag

ಕ್ರಿಕ್​ಬಜ್​ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸೆಹ್ವಾಗ್​, ನಿಮ್ಮ ಕಳಪೆ ಪ್ರದರ್ಶನದಿಂದ ನೀವು ಟೂರ್ನಿಯಿಂದ ಹೊರಬೀಳುವುದಕ್ಕೂ ಮಳೆಗೂ ಏನೂ ಸಂಬಂಧ. ನೀವು ಟೂರ್ನಿಯಲ್ಲಿ ಮುಂದುವರೆಯಲು ಯೋಗ್ಯರಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸೂಪರ್​ 08ನಲ್ಲಿ ನಿಮಗೆ ಕಠಿಣ ಎದುರಾಳಿಗಳು ಸಿಗುತ್ತಿದ್ದರು ನೀವು ಸೋಲುತ್ತೀರಿ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಯುಎಸ್​ಎ ಹಾಗೂ ಭಾರತದ ವಿರುದ್ಧ ಸೋತಿರುವ ನೀವು ಮಳೆಯನ್ನು ದೂಷಿಸುವುದು ಸರಿಯಲ್ಲ. ಸುಮ್ಮನೇ ನಿಮ್ಮ ತಪ್ಪಿಗೆ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಮಾಜಿ ಕ್ರಿಕೆಟಿ್ ವೀರೇಂದ್ರ ಸೆಹ್ವಾಗ್​ ಕಿಡಿಕಾರಿದ್ದಾರೆ. ಇತ್ತ ಸೆಹ್ವಾಗ್​ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು​ ಹಲವರು ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net