

ಟೋಕಿಯೋ: ಭಾರತದ ಕುಸ್ತಿಪಟು ಭಜರಂಗ್ ಪುನಿಯಾ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಇರಾನಿನ ಮೊರ್ಟೆಜಾ ಗೈಸಿಯನ್ನು ಸೋಲಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
27 ವರ್ಷದ ಭರವಸೆಯ ಕುಸ್ತಿಪಟುಗೆ ಇದು ಮೊದಲ ಒಲಿಂಪಿಕ್ಸ್ ಸೆಮಿಫೈನಲ್ ಆಗಿದೆ. ಇಂದು ನಡೆಯುವ ಸೆಮಿ ಫೈನಲ್ ಕಾದಾಟದಲ್ಲಿ ಅರ್ಜೆಬೈಜನ್ನ ಹಾಜಿ ಅಲಿಯಾವ್ರನ್ನು ಎದುರಿಸಲಿದ್ದಾರೆ.
ಹಾಜಿ ಅಲಿಯಾವ್ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದು, 2016 ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಇಬ್ಬರ ನಡುವಿನ ಇಂದಿನ ಪಂದ್ಯ ತೀವ್ರ ಪೈಪೋಟಿಯಿಂದ ಇರಲಿದ್ದು, ಗೆಲುವು ಯಾರ ಮಡಿಲಿಗೆ ಸೇರುವುದೋ ಕಾದು ನೋಡ ಬೇಕಿದೆ.