

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಎಡಚರ ದಿನ. ಇದರ ಪ್ರಯುಕ್ತ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಶ್ರೇಷ್ಠ ಎಡಗೈ ಆಟಗಾರರನ್ನು ನೆನೆಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಮಾಜಿ ನಾಯಕ ಸೌರವ್ ಗಂಗೂಲಿ, ಆಸ್ಟ್ರೆಲಿಯಾದ ಮ್ಯಾಥ್ಯೂ ಹೇಡನ್ ಹಾಗೂ ಆಡಂ ಗಿಲ್ಕ್ರಿಸ್ಟ್ ಅವರನ್ನು ಶ್ರೇಷ್ಠ ಎಡಗೈ ಆಟಗಾರರು ಎಂದಿದ್ದಾರೆ. ಈ ಕುರಿತು ಎಡಗೈ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾ, ವಿನೋದ್ ಕಾಂಬ್ಳಿ ಟ್ವೀಟ್ ಮೂಲಕ ಸಂಭ್ರಮಿಸಿದರೆ, ಹಿರಿಯ ಷಟ್ಲರ್ ಜ್ವಾಲಾ ಗುಟ್ಟಾ ಕೂಡ ಶುಭಾಶಯ ಕೋರಿದ್ದಾರೆ.
ಭಾರತ ತಂಡ ಸರ್ವಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ಅಂತಾರಾಷ್ಟ್ರೀಯ ಎಡಚರ ದಿನವನ್ನು ಸಂಭ್ರಮಿಸಿದ್ದಾರೆ. ಸೌರವ್ ಗಂಗೂಲಿ ಸೇರಿದಂತೆ ನಾಲ್ವರು ದಿಗ್ಗಜರ ಹೆಸರನ್ನು ಸ್ಮರಿಸಿಕೊಂಡಿದ್ದಾರೆ. ಯುವರಾಜ್ ಸಿಂಗ್ ಅಲ್ಲದೆ, ಮತ್ತೋರ್ವ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ, ಶ್ರೀಲಂಕಾದ ಕುಮಾರ ಸಂಗಕ್ಕರ, ಆಸ್ಟ್ರೆಲಿಯಾದ ಮ್ಯಾಥ್ಯೂ ಹೇಡನ್, ಇಂಗ್ಲೆಂಡ್ನ ಡೇವಿಡ್ ಗೊವೆರ್ ಹಾಗೂ ಪಾಕಿಸ್ತಾನದ ಸಯೀದ್ ಅನ್ವರ್ ಅವರನ್ನು ಹೆಸರಿಸಿದ್ದಾರೆ. ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೂಡ ಎಡಗೈ ಬ್ಯಾಟ್ಸ್ಮನ್ ಆಗಿದ್ದರು. ಇದೀಗ ಅವರ ಮಗ,ಮಗಳು ಕೂಡ ಎಡಚರು ಆಗಿದ್ದು, ಅವರನೊಂದಿಗೆ ಎಡಗೈನಲ್ಲಿ ಬ್ಯಾಟಿಂಗ್ ರೀತಿ ಪೋಸ್ ಕೊಡುತ್ತಿರುವ ವಿಡಿಯೋವೊಂದರನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. ಎಡಗೈ ಷಟ್ಲರ್ ಜ್ವಾಲಾ ಗುಟ್ಟಾ, ಟ್ವಿಟರ್ನಲ್ಲಿ ತಮ್ಮದೇ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಒಂದಲ್ಲಾ ಎರಡಲ್ಲಾ … ಇದೀಗ ಅಮೇಜಾನ್ ಪ್ರೈಮ್ನಲ್ಲಿ
ಅಂತಾರಾಷ್ಟ್ರೀಯ ಎಡಚರ ದಿನ ಹಿನ್ನೆಲೆಯಲ್ಲಿ ಎಡಗೈ ಆಟಗಾರರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೆನಿಸ್ನಲ್ಲಿ ರಾಫೆಲ್ ನಡಾಲ್ ಹೆಸರನ್ನು ಬಹುತೇಕ ಮಂದಿ ಸೂಚಿಸಿದ್ದರೆ, ಕ್ರಿಕೆಟ್ನಲ್ಲಿ ಹಲವು ಮಂದಿಯ ಹೆಸರನ್ನು ಸೂಚಿಸಲಾಗಿದೆ.