ಏಕದಿನ ವಿಶ್ವಕಪ್​ ವಿಜೇತರಿಗೆ ನೀಡಲಾಗುವ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ

wc web
Published on

ಬೆಂಗಳೂರು: ಅಕ್ಟೋಬರ್​ 5ರಿಂದ ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಇದರನ್ವಯ ಚಾಂಪಿಯನ್​ ತಂಡ 33.18 ಕೋಟಿ ರೂ. (4 ದಶಲಕ್ಷ ಡಾಲರ್​) ಬಹುಮಾನ ಪಡೆಯಲಿದ್ದರೆ, ರನ್ನರ್​ಅಪ್​ ತಂಡ 16.58 ಕೋಟಿ ರೂ. (2 ದಶಲಕ್ಷ ಡಾಲರ್​) ಗಳಿಸಲಿದೆ.

ಸೆಮಿಫೈನಲ್​ನಲ್ಲಿ ಸೋತ 2 ತಂಡಗಳು ತಲಾ 6.63 ಕೋಟಿ ರೂ. ಪಡೆಯಲಿವೆ. ನಾಕೌಟ್​ ಹಂತಕ್ಕೇರಲು ವಿಫಲವಾದ ಉಳಿದ 6 ತಂಡಗಳು ತಲಾ 82.91 ಲಕ್ಷ ರೂ.ಗೆ ತೃಪ್ತಿಪಡಲಿವೆ. ಲೀಗ್​ ಹಂತದ ಪ್ರತಿ ಪಂದ್ಯದಲ್ಲಿ ಗೆಲುವು ಕಾಣುವ ತಂಡ ತಲಾ 33.16 ಲಕ್ಷ ರೂ. ಪಡೆಯಲಿವೆ. 48 ಪಂದ್ಯಗಳ ಟೂರ್ನಿಯಲ್ಲಿ ಒಟ್ಟಾರೆ 82.91 ಕೋಟಿ ರೂ. ಬಹುಮಾನ ಮೊತ್ತ ಹಂಚಿಕೆಯಾಗಲಿದೆ.

ನವೆಂಬರ್​ 19ರವರೆಗೆ ಭಾರತದ 10 ತಾಣಗಳಲ್ಲಿ ವಿಶ್ವಕಪ್​ ಪಂದ್ಯಗಳು ನಡೆಯಲಿವೆ. ಅಕ್ಟೋಬರ್​ 5ರಂದು ಅಹಮದಾಬಾದ್​ನಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ತಂಡಗಳ ಮುಖಾಮುಖಿಯೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಅದಕ್ಕೆ ಹಿಂದಿನ ದಿನ ವರ್ಣರಂಜಿತ ಸಮಾರಂಭದೊಂದಿಗೆ ಟೂರ್ನಿಯ ಆರಂಭವನ್ನು ಘೋಷಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net