

ಕೋಪನ್ಹೇಗನ್ (ಡೆನ್ಮಾರ್ಕ್): ಭಾರತದ ಎಚ್ಎಸ್ ಪ್ರಣಯ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಉಪಾಂತ್ಯಕ್ಕೇರಿದ್ದಾರೆ. ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ಗೆ ತವರು ಅಂಗಣದಲ್ಲೇ ಆಘಾತಕಾರಿ ಸೋಲುಣಿಸಿದ ಪ್ರಣಯ್ಗೆ ಪದಕ ಖಾತ್ರಿಯಾಗಿದೆ. ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ೈನಲ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಆಘಾತಕಾರಿ ಸೋಲು ಕಂಡು ನಿರಾಸೆ ಅನುಭವಿಸಿತು.
ಪ್ರಣಯ್ ಶುಕ್ರವಾರ ನಡೆದ ಎಂಟರ ಟ್ಟದ ಪಂದ್ಯದಲ್ಲಿ ಅಕ್ಸೆಲ್ಸನ್ ವಿರುದ್ಧ 13-21, 21-15, 21-16ರಿಂದ ದಿಟ್ಟ ಗೆಲುವು ಸಾಧಿಸಿ ಇತಿಹಾಸ ಬರೆದರು. ಅವರು ಟೂರ್ನಿಯಲ್ಲಿ ಸವಾಲು ಜೀವಂತ ಉಳಿಸಿಕೊಂಡಿರುವ ಏಕೈಕ ಭಾರತೀಯರೂ ಆಗಿದ್ದಾರೆ.
ಕೇರಳದ ಆಟಗಾರ ಎಚ್ಎಸ್ ಪ್ರಣಯ್ ಭಾರತಕ್ಕೆ ವಿಶ್ವ ಚಾಂಪಿಯನ್ಷಿಪ್ ಇತಿಹಾಸದಲ್ಲಿ 14ನೇ ಪದಕ ಗೆದ್ದುಕೊಟ್ಟಿದ್ದಾರೆ. ಈ ಮುನ್ನ ಪಿವಿ ಸಿಂಧು 5 ಮತ್ತು ಸೈನಾ ನೆಹ್ವಾಲ್ 2 ಪದಕ ಗೆದ್ದಿದ್ದರೆ, ಕಿಡಂಬಿ ಶ್ರೀಕಾಂತ್, ಲಕ್ಷ$್ಯ ಸೇನ್, ಸಾಯಿ ಪ್ರಣಿತ್, ಪ್ರಕಾಶ್ ಪಡುಕೋಣೆ ತಲಾ 1 ಪದಕ ಗೆದ್ದಿದ್ದಾರೆ. ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಮತ್ತು ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಜೋಡಿ ಪದಕ ಗೆದ್ದ ಸಾಧನೆ ಮಾಡಿದೆ.
ಸಾತ್ವಿಕ್-ಚಿರಾಗ್ಗೆ ನಿರಾಸೆ: ವಿಶ್ವ ನಂ. 2 ಸಾತ್ವಿಕ್-ಚಿರಾಗ್ ಜೋಡಿ 11ನೇ ಶ್ರೇಯಾಂಕಿತ ಡೆನ್ಮಾರ್ಕ್ನ ಕಿಮ್ ಆಸ್ಟುಪ್ ಮತ್ತು ಆಂಡರ್ಸ್ ಸ್ಕರುಪ್ ಜೋಡಿಯ ವಿರುದ್ಧ 18-21, 19-21 ನೇರಗೇಮ್ಗಳಿಂದ ಪರಾಭವಗೊಂಡಿತು. 2021ರಲ್ಲಿ ಕಂಚು ಗೆದ್ದಿದ್ದ ಸಾತ್ವಿಕ್-ಚಿರಾಗ್ ಈ ಪಂದ್ಯ ಗೆದ್ದರೆ ಪದಕ ಖಚಿತಪಡಿಸಿಕೊಳ್ಳುವ ಅವಕಾಶ ಹೊಂದಿದ್ದರು.