ಬಿಸಿಸಿಐ ಎಚ್ಚರಿಕೆಯ ನಡುವೆಯೂ ರಣಜಿ ಟ್ರೋಫಿಗೆ ಇಶಾನ್​ ಕಿಶನ್​ ಮತ್ತೆ ಚಕ್ಕರ್​!

kishan web
Published on

ನವದೆಹಲಿ: ಗುತ್ತಿಗೆ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ಆಡುವುದು ಕಡ್ಡಾಯವೆಂದು ಬಿಸಿಸಿಐ ಸೂಚಿಸಿರುವ ನಡುವೆಯೂ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​, ರಣಜಿ ಟ್ರೋಫಿಯಲ್ಲಿ ಜಾರ್ಖಂಡ್​ ತಂಡದ ಕೊನೇ ಲೀಗ್​ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಇದರಿಂದ ಅವರ ವೃತ್ತೀಜಿವನ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

ಆದರೆ ಬ್ಯಾಟಿಂಗ್​ ತಾಂತ್ರಿಕತೆಯ ದೋಷ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಕಿಶನ್​ ರೆಡ್​ಬಾಲ್​ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ.

ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಜತೆ ಬರೋಡದಲ್ಲಿ ಸದ್ಯ ಅಭ್ಯಾಸ ನಡೆಸುತ್ತಿರುವ 25 ವರ್ಷದ ಕಿಶನ್​, ಮುಂಬೈನಲ್ಲಿ ಡಿವೈ ಪಾಟೀಲ್​ ಟಿ20 ಟೂರ್ನಿಯಲ್ಲಿ ತನ್ನ ಉದ್ಯೋಗದಾತ ಆರ್​ಬಿಐ ತಂಡದ ಪರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net