ಮಹಿಳಾ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಫೈಟ್ ಯಾವಾಗ? T20 World Cup 2026

Untitled design (1)
Published on

T20 World Cup 2026: ಐಸಿಸಿ 2026ರ ಮಹಿಳಾ ಟಿ20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಆತಿಥೇಯ ಇಂಗ್ಲೆಂಡ್ ತಂಡವು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. 33 ಪಂದ್ಯಗಳ ಈ ಸಮರ ಜೂನ್ 12 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದ್ದು, ಫೈನಲ್ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಜೂನ್ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಸೆಣಸಾಟ ನಡೆಸಲಿವೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ 12 ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿಫೈನಲ್‌ ಪಂದ್ಯ ಕ್ರಮವಾಗಿ ಜೂನ್ 30 ಮತ್ತು ಜುಲೈ 2 ರಂದು ಓವಲ್‌ನಲ್ಲಿ ನಡೆಯಲಿವೆ.

ಟಿ20 ವಿಶ್ವಕಪ್ ವೇಳಾಪಟ್ಟಿ

ಜೂನ್ 19: ನ್ಯೂಜಿಲೆಂಡ್ vs ಕ್ವಾಲಿಫೈಯರ್, ಹ್ಯಾಂಪ್‌ಶೈರ್

ಜೂನ್ 18: ವೆಸ್ಟ್ ಇಂಡೀಸ್ vs ಕ್ವಾಲಿಫೈಯರ್, ಹೆಡಿಂಗ್ಲಿ

ಜೂನ್ 17: ದಕ್ಷಿಣ ಆಫ್ರಿಕಾ vs ಪಾಕಿಸ್ತಾನ, ಎಡ್ಜ್‌ಬಾಸ್ಟನ್

ಜೂನ್ 17: ಭಾರತ vs ಕ್ವಾಲಿಫೈಯರ್, ಹೆಡಿಂಗ್ಲಿ

ಜೂನ್ 17: ಆಸ್ಟ್ರೇಲಿಯಾ vs ಕ್ವಾಲಿಫೈಯರ್, ಹೆಡಿಂಗ್ಲಿ

ಜೂನ್ 16: ಇಂಗ್ಲೆಂಡ್ vs ಕ್ವಾಲಿಫೈಯರ್, ಹ್ಯಾಂಪ್‌ಶೈರ್

ಜೂನ್ 16: ನ್ಯೂಜಿಲೆಂಡ್ vs ಶ್ರೀಲಂಕಾ, ಹ್ಯಾಂಪ್‌ಶೈರ್

ಜೂನ್ 14: ಭಾರತ vs ಪಾಕಿಸ್ತಾನ, ಎಡ್ಜ್‌ಬಾಸ್ಟನ್

ಜೂನ್ 14: ಕ್ವಾಲಿಫೈಯರ್ vs ಕ್ವಾಲಿಫೈಯರ್, ಎಡ್ಜ್‌ಬಾಸ್ಟನ್

ಜೂನ್ 13: ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್, ಹ್ಯಾಂಪ್‌ಶೈರ್

ಜೂನ್ 13: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್

ಜೂನ್ 13: ಕ್ವಾಲಿಫೈಯರ್ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್

ಜೂನ್ 12: ಇಂಗ್ಲೆಂಡ್ vs ಶ್ರೀಲಂಕಾ, ಎಡ್ಜ್‌ಬಾಸ್ಟನ್

ಜುಲೈ 5: ಫೈನಲ್‌, ಲಾರ್ಡ್ಸ್ ಕ್ರಿಕೆಟ್ ಮೈದಾನ

ಜುಲೈ 2: ಸೆಮಿಫೈನಲ್ 2, ದಿ ಓವಲ್

ಜೂನ್ 30: ಸೆಮಿಫೈನಲ್ 1, ದಿ ಓವಲ್

ಜೂನ್ 28: ಆಸ್ಟ್ರೇಲಿಯಾ vs ಭಾರತ, ಲಾರ್ಡ್ಸ್ ಕ್ರಿಕೆಟ್ ಮೈದಾನ

ಜೂನ್ 28: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್, ಲಾರ್ಡ್ಸ್ ಕ್ರಿಕೆಟ್ ಮೈದಾನ

ಶನಿವಾರ ಜೂನ್ 27: ಇಂಗ್ಲೆಂಡ್ v ನ್ಯೂಜಿಲೆಂಡ್, ದಿ ಓವಲ್

ಜೂನ್ 27: ವೆಸ್ಟ್ ಇಂಡೀಸ್ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ

ಜೂನ್ 27: ಪಾಕಿಸ್ತಾನ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ

ಜೂನ್ 26: ಶ್ರೀಲಂಕಾ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್

ಜೂನ್ 25: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ

ಜೂನ್ 25: ಭಾರತ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್

ಜೂನ್ 24: ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಲಾರ್ಡ್ಸ್

ಜೂನ್ 23: ಆಸ್ಟ್ರೇಲಿಯಾ vs ಪಾಕಿಸ್ತಾನ, ಹೆಡಿಂಗ್ಲಿ

ಜೂನ್ 23: ಶ್ರೀಲಂಕಾ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ

ಜೂನ್ 23: ನ್ಯೂಜಿಲೆಂಡ್ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ

ಜೂನ್ 21: ದಕ್ಷಿಣ ಆಫ್ರಿಕಾ vs ಭಾರತ, ಓಲ್ಡ್ ಟ್ರಾಫರ್ಡ್

ಜೂನ್ 21: ವೆಸ್ಟ್ ಇಂಡೀಸ್ vs ಶ್ರೀಲಂಕಾ, ಬ್ರಿಸ್ಟಲ್ ಕೌಂಟಿ ಮೈದಾನ

ಜೂನ್ 20: ಇಂಗ್ಲೆಂಡ್ vs ಕ್ವಾಲಿಫೈಯರ್, ಹೆಡಿಂಗ್ಲಿ

ಜೂನ್ 20: ಪಾಕಿಸ್ತಾನ vs ಕ್ವಾಲಿಫೈಯರ್, ಹ್ಯಾಂಪ್‌ಶೈರ್

ಜೂನ್ 20: ಆಸ್ಟ್ರೇಲಿಯಾ vs ಕ್ವಾಲಿಫೈಯರ್, ಹ್ಯಾಂಪ್‌ಶೈರ್

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net