

ಮುಂಬೈ: ಕಳೆದ ಕೆಲ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಸನಿಹದಲ್ಲಿ ಮುಗ್ಗರಿಸಿರುವ ನಿರಾಸೆಯನ್ನು ಬದಿಗೊತ್ತಿ ಈ ಬಾರಿ ಟಿ20 ವಿಶ್ವಕಪ್ ಜಯಿಸುವ ವಿಶ್ವಾಸವನ್ನು ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 3ರಿಂದ ಯುಎಇಯಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್ಗಾಗಿ ಮಂಗಳವಾರ ವಿಮಾನ ಏರುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹರ್ಮಾನ್ಪ್ರೀತ್, "ಇದು ನಮ್ಮ ಅತ್ಯುತ್ತಮ ತಂಡವಾಗಿದೆ. ದೀರ್ಕಾಲದಿಂದ ಈ ಆಟಗಾರ್ತಿಯರು ಜತೆಯಾಗಿ ಆಡುತ್ತಿದ್ದಾರೆ. ಕಳೆದ ಸಲ ಸ್ವಲ್ಪದರಲ್ಲಿ ಪ್ರಶಸ್ತಿ ತಪ್ಪಿಸಿಕೊಂಡಿದ್ದೆವು. ಈ ಸಲ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿದ್ದೇವೆ. ಹಿಂದೆಂದಿಗಿಂತ ಹೆಚ್ಚು ಸನ್ನದ್ಧರಾಗಿದ್ದೇವೆ' ಎಂದರು. ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಕೋಚ್ ಅಮೊಲ್ ಮುಜುಮ್ದಾರ್ ಮತ್ತು ಆಯ್ಕೆ ಸಮಿತಿ ಅಧ್ಯೆ ನೀತು ಡೇವಿಡ್ ಕೂಡ ಹಾಜರಿದ್ದರು.
ಜುಲೈನಲ್ಲಿ ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಸೋತ ಬಲಿಕ ಭಾರತ ತಂಡ ಯಾವುದೇ ಪಂದ್ಯ ಆಡಿಲ್ಲ. ಆದರೆ ಈ ಸಮಯದಲ್ಲಿ ಬೆಂಗಳೂರಿನ ಎನ್ಸಿಎಯಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿತ್ತು. ಟಿ20 ವಿಶ್ವಕಪ್ನಲ್ಲಿ ಭಾರತ ಅ. 4ರಂದು ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಅದಕ್ಕೆ ಮುನ್ನ ಸೆ.29ಕ್ಕೆ ವೆಸ್ಟ್ ಇಂಡೀಸ್ ಮತ್ತು ಅ.1ಕ್ಕೆ ದಣ ಆಫ್ರಿಕಾ ವಿರುದ್ಧ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.