ವಿರಾಟ್​-ಅನುಷ್ಕಾ ದಂಪತಿಗೆ ಕ್ರಿಕೆಟ್​ ವಲಯದಿಂದ ಅಭಿನಂದನೆಗಳ ಮಹಾಪೂರ..!

virat kohli anushka for web
Published on

ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಸ್ಟಾರ್​ ನಟಿ ಅನುಷ್ಕಾ ಶರ್ಮ ಜೋಡಿಗೆ ಕ್ರಿಕೆಟ್​ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿರಾಟ್​ ಕೊಹ್ಲಿ ಗುರುವಾರವಷ್ಟೇ ಇನ್​ಸ್ಟಾಗ್ರಾಂನಲ್ಲಿ 2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಕ್ರಿಕೆಟ್​ ವಲಯ ಹಾಗೂ ಬಾಲಿವುಡ್​ ಮಂದಿ ತಾರಾ ಜೋಡಿಗೆ ಶುಭಾಶಯ ಸಲ್ಲಿಸಿದ್ದಾರೆ.

ಸದ್ಯ ಐಪಿಎಲ್​ನಲ್ಲಿ ಆಡುವ ಸಲುವಾಗಿ ವಿರಾಟ್​ ಕೊಹ್ಲಿ ದುಬೈನಲ್ಲಿದ್ದು, ಇದೀಗ ಕ್ರಿಕೆಟ್​ನತ್ತ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅಪ್ಪನಾಗುತ್ತಿರುವ ವಿಷಯವನ್ನು ಕೊಹ್ಲಿ ಬಹಿರಂಗಗೊಳಿಸಿದ್ದೆ ತಡ, ದಿಗ್ಗಜ ಸಚಿನ್ ತೆಂಡುಲ್ಕರ್, ಸಹಪಾಠಿಗಳಾದ ಯಜುವೇಂದ್ರ ಚಾಹಲ್​, ಕ್ರೀಸ್​ ಗೇಲ್​, ಹರ್ಭಜನ್​ ಸಿಂಗ್​, ವೃದ್ಧಿಮಾನ್​ ಸಾಹ, ಅಜಿಂಕ್ಯ ರಹಾನೆ, ಉಮೇಶ್​ ಯಾದವ್​ ಸೇರಿದಂತೆ ಹಲವು ಮಂದಿ ತಮ್ಮ ಸಾಮಾಜಿಕ ಪುಟಗಳಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ವಿರಾಟ್​ ಕೊಹ್ಲಿ ಕಳೆದ 6 ತಿಂಗಳಿಂದ ಮುಂಬೈನಲ್ಲೇ ಪತ್ನಿ ಅನುಷ್ಕಾ ಜತೆಗೆ ಉಳಿದುಕೊಂಡಿದ್ದರು, 13ನೇ ಐಪಿಎಲ್​ ಯುಎಇಗೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಕೊಹ್ಲಿ ಕೂಡ ಕಳೆದ ವಾರ ಆರ್​ಸಿಬಿ ತಂಡದ ಜತೆ ಪ್ರಯಾಣಿಸದೆ, ಪ್ರತ್ಯೇಕವಾಗಿ ಮುಂಬೈನಿಂದ ದುಬೈಗೆ ತೆರಳಿದ್ದರು. ಸೆ.19 ರಿಂದ ನ.10 ರವರೆಗೆ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net