

ನವದೆಹಲಿ: ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಂದೆ-ತಾಯಿ ಆಗುತ್ತಿರುವ ಸಂತೋಷವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿ ನೆಟ್ಟಿಗರು ಮೀಮ್ಸ್ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಅನುಷ್ಕಾ ಶರ್ಮಾ ಟ್ವಿಟರ್ ಮೂಲಕ ಮೊದಲ ಬಾರಿಗೆ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ನಾವು ಇಬ್ಬರಲ್ಲ, ಮೂವರು. 2021 ಜನವರಿಗೆ ಬರುತ್ತಿದ್ದೇವೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ವಿರಾಟ್ ಸಹ ಅಪ್ಪನಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಅನುಷ್ಕಾ ಗರ್ಭಿಣಿ ಎಂಬ ಸುದ್ದಿಯನ್ನು ಘೋಷಿಸುತ್ತಿದ್ದಂತೆ ಇದೀಗ ಟ್ವಿಟರ್ನಲ್ಲಿ #Virushka ಟ್ರೆಂಡ್ ಆಗಿದೆ. ವಿರೂಷ್ಕಾ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸಾಕಷ್ಟು ಮೀಮ್ಗಳು ಹರಿದು ಬರುತ್ತಿವೆ. ಉತ್ಸವಕ್ಕೆ ತಯಾರಿ ಮಾಡಿ, ವಿರೂಷ್ಕಾ ದಂಪತಿಗೆ ಶುಭವಾಗಲಿ ಎಂದೆಲ್ಲಾ ಮೀಮ್ಸ್ಗಳ ಮುಖಾಂತರ ಶುಭ ಹಾರೈಸುತ್ತಿದ್ದಾರೆ.
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೂಷ್ಕಾ ದಂಪತಿ ಕುರಿತು ಹರಿದುಬಂದ ಮೀಮ್ಸ್ಗಳು ಹೀಗಿವೆ....
ಅಂದಹಾಗೆ ತುಂಬಾ ವರ್ಷಗಳ ಡೇಟಿಂಗ್ ಬಳಿಕ ಅನುಷ್ಕಾ ಮತ್ತು ವಿರಾಟ್ 2017ರ ಡಿಸೆಂಬರ್ನಲ್ಲಿ ಇಟಲಿಯಲ್ಲಿ ಸಪ್ತಪದಿ ತುಳಿದರು. ಸದ್ಯ ಇಬ್ಬರು ಮುಂಬೈ ನಿವಾಸದಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಝೀರೋ ಚಿತ್ರದ ಬಳಿಕ ನಟನೆಯಲ್ಲಿ ಬ್ರೇಕ್ ತೆಗೆದುಕೊಂಡಿರುವ ಅನುಷ್ಕಾ, ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.
ಇನ್ನು ವಿರಾಟ್ ದುಬೈನಲ್ಲಿ ನಡೆಯಲಿರುವ ಐಪಿಎಲ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)