

ಬೆಂಗಳೂರು: ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳವಾರ 39ನೇ ವರ್ಷಕ್ಕೆ ಕಾಲಿಟ್ಟರು. ಭಾರತೀಯ ಕ್ರೀಡಾವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವೃತ್ತೀಜಿವನದಲ್ಲಿ ಬಹುತೇಕ ಸಂಧ್ಯಾಕಾಲದಲ್ಲಿರುವ ಧೋನಿ ಅವರಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಕೊರುತ್ತಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿೈನಲ್ ಪಂದ್ಯವೇ ಧೋನಿ ಅವರ ಕಡೇ ಕ್ರಿಕೆಟ್ ಪಂದ್ಯವಾಗಿದೆ. ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಧೋನಿ, ಐಪಿಎಲ್ಗೆ ಸಿದ್ಧವಾಗುತ್ತಿದ್ದರೂ ಕರೊನಾ ವೈರಸ್ ಭೀತಿಯಿಂದಾಗಿ ಲೀಗ್ ಕೂಡ ಅನಿಶ್ಚಿತತೆಯಲ್ಲಿ ಮುಳುಗಿದೆ.
ಭಾರತ ತಂಡದ ಮುಖ್ಯಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ, ಟ್ವಿಟರ್ನಲ್ಲಿ ವಿಶ್ ಮಾಡಿದ್ದಾರೆ. ಯಂಗ್ಸ್ಟರ್ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಹ್ಯಾಪಿರ್ಬತ್ಡೇ ಮಹಿ ಭಾಯ್, ಉತ್ತಮ ಆರೋಗ್ಯ ಮತ್ತು ಯಾವಾಗಲೂ ಸಂತೋಷ ತುಂಬಿರಲಿ, ದೇವರು ಒಳ್ಳೆದು ಮಾಡಲಿ ಎಂದು ಕೊಹ್ಲಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಧೋನಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿಎಸ್ಕೆ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೊ ಹೊಸ ಆಲ್ಬಂ ಬಿಡುಗಡೆ ಮಾಡಿದ್ದಾರೆ.
2019ರ ಜುಲೈ 9 ರಂದು ನಡೆದ ವಿಶ್ವಕಪ್ ಸೆಮಿೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ಎದುರು ಸೋಲನುಭವಿಸಿತು. ಇದು ಕೂಡ ಧೋನಿ ಪಾಲಿಗೆ ಕಡೇ ಪಂದ್ಯವಾಗಿದೆ. 2020ರ ಐಪಿಎಲ್ ಸಿದ್ಧತೆಗಾಗಿ ಧೋನಿ ಚೆನ್ನೆ$ಗೆ ಆಗಮಿಸಿದರೂ ಕರೊನಾ ವೈರಸ್ ಭೀತಿಯಿಂದಾಗಿ ಮಧ್ಯದಲ್ಲಿಯೇ ತವರಿಗೆ ವಾಪಸಾದರು. ಜಾರ್ಖಂಡ್ ರಾಜಧಾನಿ ರಾಂಚಿ ಹೊರವಲಯದಲ್ಲಿರುವ ತಮ್ಮ ಾಮ್ರ್ ಹೌಸ್ನಲ್ಲಿ ಧೋನಿ, ಪತ್ನಿ ಸಾ ಸಿಂಗ್ ಹಾಗೂ ಮಗಳು ಝೀವಾ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.