ಕೇನ್​ ವಿಲಿಯಮ್ಸನ್​ಗೆ 30ನೇ, ರಚಿನ್ ರವೀಂದ್ರ​ಗೆ ಚೊಚ್ಚಲ ಟೆಸ್ಟ್​ ಶತಕದ ಸಂಭ್ರಮ

kane web
Published on

ಮೌಂಟ್​ ಮೌಂಗನುಯಿ: ನಾಯಕ ಕೇನ್​ ವಿಲಿಯಮ್ಸನ್​ (112*) ಸಿಡಿಸಿದ ದಾಖಲೆಯ 30ನೇ ಶತಕ ಮತ್ತು ಬೆಂಗಳೂರು ಮೂಲದ ಆಲ್ರೌಂಡರ್​ ರಚಿನ್​ ರವೀಂದ್ರ (118*) ಸಿಡಿಸಿದ ಚೊಚ್ಚಲ ಶತಕದ ಬಲದಿಂದ ನ್ಯೂಜಿಲೆಂಡ್​ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬೃಹತ್​ ಮೊತ್ತದತ್ತ ಮುನ್ನಡೆದಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕಿವೀಸ್​ ದಿನದಂತ್ಯಕ್ಕೆ 2 ವಿಕೆಟ್​ಗೆ 258 ರನ್​ ಪೇರಿಸಿದೆ. ತವರಿನ ಟಿ20 ಲೀಗ್​ ಹಿನ್ನೆಲೆಯಲ್ಲಿ ದ್ವೀತಿಯ ದರ್ಜೆ ತಂಡವನ್ನು ಕಣಕ್ಕಿಳಿಸಿರುವ ದಕ್ಷಿಣ ಆಫ್ರಿಕಾ, ಮೊದಲ 2 ವಿಕೆಟ್​ಗಳನ್ನು 39 ರನ್​ಗಳಿಗೆ ಕಬಳಿಸಿ ಆತಿಥೇಯರಿಗೆ ಆರಂಭಿಕ ಆಘಾತ ನೀಡಿತು. ನಂತರ ಕೇನ್​-ರಚಿನ್​ ಮುರಿಯದ 3ನೇ ವಿಕೆಟ್​ಗೆ 219 ರನ್​ ಸೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net