

ಮೌಂಟ್ ಮೌಂಗನುಯಿ: ನಾಯಕ ಕೇನ್ ವಿಲಿಯಮ್ಸನ್ (129 ರನ್, 297 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ 23ನೇ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿ ಸುಸ್ಥಿತಿಯಲ್ಲಿ ನೆಲೆಸಿದೆ.
ಬೇ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಭಾನುವಾರ 3 ವಿಕೆಟ್‌ಗೆ 222 ರನ್‌ಗಳಿಂದ ಆಟ ಮುಂದುವರಿಸಿದ ಕಿವೀಸ್ ತಂಡ, ಚಹಾ ವಿರಾಮದ ಬಳಿಕ 431 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಪಾಕಿಸ್ತಾನ ತಂಡ ದಿನದಂತ್ಯಕ್ಕೆ 1 ವಿಕೆಟ್‌ಗೆ 30 ರನ್ ಗಳಿಸಿದ್ದು, 401 ರನ್ ಹಿನ್ನಡೆಯಲ್ಲಿದೆ.
94 ರನ್‌ನಿಂದ ದಿನದಾಟ ಆರಂಭಿಸಿದ ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್ (56) ಜತೆಗೂ ಶತಕದ ಜತೆಯಾಟವಾಡಿದರು. ಇದಕ್ಕೆ ಮುನ್ನ ಮೊದಲ ದಿನದಾಟದಲ್ಲಿ ಅವರು ರಾಸ್ ಟೇಲರ್ (70) ಜತೆ ಶತಕದ ಜತೆಯಾಟವಾಡಿದ್ದರು. ಭೋಜನ ವಿರಾಮಕ್ಕೆ ಮುನ್ನ ವಿಲಿಯಮ್ಸನ್ ಔಟಾದರೆ, ಬಳಿಕ ಬಿಜೆ ವಾಟ್ಲಿಂಗ್ (73) ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
10 ಟೆಸ್ಟ್‌ಗಳಲ್ಲಿ ಕೇನ್ ರನ್‌ಪ್ರವಾಹ
ಕೇನ್ ವಿಲಿಯಮ್ಸನ್ ತಾನಾಡಿದ ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ ರನ್‌ಪ್ರವಾಹವನ್ನೇ ಹರಿಸಿದ್ದಾರೆ. 2 ದ್ವಿಶತಕ, 1 ಶತಕ, 3 ಅರ್ಧಶತಕಗಳನ್ನು ಅವರು ಬಾರಿಸಿದ್ದಾರೆ.
ಇದನ್ನೂ ಓದಿ: ಅಬುಧಾಬಿ ಟಿ10 ಲೀಗ್ಗೆ ಮೂವರು ಭಾರತೀಯರು
ನ್ಯೂಜಿಲೆಂಡ್: 155 ಓವರ್‌ಗಳಲ್ಲಿ 431 (ವಿಲಿಯಮ್ಸನ್ 129, ನಿಕೋಲ್ಸ್ 56, ವಾಟ್ಲಿಂಗ್ 73, ಸ್ಯಾಂಟ್ನರ್ 19, ಜೇಮಿಸನ್ 32, ವ್ಯಾಗ್ನರ್ 19, ಶಹೀನ್ ಅಫ್ರಿದಿ 109ಕ್ಕೆ 4, ಯಾಸಿರ್ ಷಾ 113ಕ್ಕೆ 3, ಅಬ್ಬಾಸ್ 49ಕ್ಕೆ 1, ನಸೀಮ್ ಷಾ 96ಕ್ಕೆ 1), ಪಾಕಿಸ್ತಾನ: 20 ಓವರ್‌ಗಳಲ್ಲಿ 1 ವಿಕೆಟ್‌ಗೆ 30 (ಮಸೂದ್ 10, ಅಬಿದ್ ಅಲಿ 19*, ಜೇಮಿಸನ್ 5ಕ್ಕೆ 1).