ಮೊಳಗಿತು ಧೋನಿ ಅಭಿಮಾನಿಗಳ ಕೂಗು; ಸಿಎಸ್​ಕೆ ತವರಿನಲ್ಲೇ ಗೆದ್ದು ಬೀಗಲಿದ್ಯಾ ಸನ್​ರೈಸರ್ಸ್ ಹೈದರಾಬಾದ್​?

WhatsApp Image 2024-04-28 at 9.37.52 PM
Published on

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಿದ್ದು, ಭಾರೀ ಪೈಪೋಟಿ ಕೊಡಲು ಸಜ್ಜಾಗಿರುವುದು ಮೊದಲ ಇನ್ನಿಂಗ್ಸ್​ ಅಂತ್ಯದ ಮೂಲಕ ತಿಳಿದುಬಂದಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಎಸ್​ಆರ್​ಎಚ್​ ಸಿಎಸ್​ಕೆಗೆ ಬ್ಯಾಟ್ ಮಾಡಲು ತಿಳಿಸಿತು.

ಆರಂಭಿಕ ಹಂತದಿಂದಲೇ ಉತ್ತಮ ಓಪನಿಂಗ್ ನೀಡಿದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್​ಗೆ ಡ್ಯಾರಿ ಮಿಚೆಲ್ ಮತ್ತು ಶಿವಂ ದುಬೆ ಕೊಟ್ಟ ಸಾಥ್​ಗೆ ಚೆನ್ನೈ ಪಡೆ 20 ಓವರ್​ಗಳಲ್ಲಿ 212 ರನ್​ಗಳನ್ನು ಸನ್​ರೈಸರ್ಸ್​ಗೆ ಚೇಸ್ ಮಾಡಲು ಸವಾಲು ಹಾಕಿದೆ. ಕಳೆದ ಪಂದ್ಯಗಳಂತೆ ಕಡೆಯ ಓವರ್​ನಲ್ಲಿ ಬಂದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಫಿನಿಶಿಂಗ್ ಸ್ಟೈಲ್​ನಲ್ಲೇ ಪಂದ್ಯವನ್ನು ಆಡಿ, ಅಭಿಮಾನಿಗಳ ಮನಗೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net