IPL 2024: ಗುಜರಾತ್​ ಟೈಟಾನ್ಸ್​ ಯಶಸ್ಸಿನ ಲಯ ಮುಂದುವರಿಸುವರೇ ಶುಭಮಾನ್​ ಗಿಲ್​?

web gt web
Published on

ಅಹಮದಾಬಾದ್: ಆಡಿದ ಮೊದಲ 2 ಆವೃತ್ತಿಗಳಲ್ಲಿ ಚಾಂಪಿಯನ್​ ಮತ್ತು ರನ್ನರ್​ಅಪ್​ ಆಗಿರುವ ವಿಶೇಷ ಸಾಧನೆ ಗುಜರಾತ್​ ತಂಡದ್ದಾಗಿದೆ. ಆದರೆ ಹಾರ್ದಿಕ್​ ಪಾಂಡ್ಯ ಮುಂಬೈಗೆ ವರ್ಗಾವಣೆಗೊಂಡಿರುವುದರಿಂದ, ಈ ಬಾರಿ ಯುವ ಬ್ಯಾಟರ್​ ಶುಭಮಾನ್​ ಗಿಲ್​ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.

ನಾಯಕತ್ವದಲ್ಲಿ ಗಿಲ್​ ಅನನುಭವಿಯಾಗಿದ್ದರೂ, ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​, ಟಿ20 ಸ್ಪೆಷಲಿಸ್ಟ್​ ಆ್ಘನ್​ ಸ್ಪಿನ್ನರ್​ ರಶೀದ್​ ಖಾನ್​ ತಂಡದಲ್ಲಿರುವುದು ಲಾಭದಾಯಕವಾಗಬಹುದು. ಪಾಂಡ್ಯ ಇಲ್ಲದೆಯೂ ಯಶಸ್ಸು ಕಾಣಬಲ್ಲೆ ಎಂಬುದನ್ನು ನಿರೂಪಿಸುವ ಸವಾಲು ಕೂಡ ತಂಡದ ಮುಂದಿದೆ. ಇನ್ನು ಅನುಭವಿ ವೇಗಿ ಮೊಹಮದ್​ ಶಮಿ ಗಾಯದಿಂದಾಗಿ ಅಲಭ್ಯರಾಗಿರುವುದು ಪ್ರಮುಖ ಹಿನ್ನಡೆಯಾಗಿದೆ.

ತಂಡ: ಶುಭಮಾನ್​ ಗಿಲ್​(ನಾಯಕ), ಡೇವಿಡ್​ ಮಿಲ್ಲರ್​, ರಾಹುಲ್​ ತೆವಾಟಿಯಾ, ಆರ್​. ಸಾಯಿ ಕಿಶೋರ್​, ಅಭಿನವ್​ ಮನೋಹರ್​, ವೃದ್ಧಿಮಾನ್​ ಸಾಹ, ಜಯಂತ್​ ಯಾದವ್​, ವಿಜಯ್​ ಶಂಕರ್​, ಅಜ್ಮತ್​ಉಲ್ಲಾ ಒಮರ್ಜಾಯಿ, ಮೋಹಿತ್​ ಶರ್ಮ, ದರ್ಶನ್​ ನಲಕಂಡೆ, ಸಾಯಿ ಸುದರ್ಶನ್​, ರಶೀದ್​ ಖಾನ್​, ಮ್ಯಾಥ್ಯೂ ವೇಡ್​, ಕೇನ್​ ವಿಲಿಯಮ್ಸನ್​, ಜೋಶ್​ ಲಿಟಲ್​, ಉಮೇಶ್​ ಯಾದವ್​, ನೂರ್​ ಅಹ್ಮದ್​, ಕಾರ್ತಿಕ್​ ತ್ಯಾಗಿ, ಮಾನವ ಸುಥಾರ್​, ಸ್ಪೆನ್ಸರ್​ ಜಾನ್ಸನ್​, ರಾಬಿನ್​ ಮಿಂಜ್​, ಸುಶಾಂತ್​ ಮಿಶ್ರಾ, ಶಾರುಖ್​ ಖಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net