

ನವದೆಹಲಿ: ಭೀಕರ ಕಾರು ಅಪಘಾತದಲ್ಲಿ ಅದೃಷ್ಟದ ಬಲದೊಂದಿಗೆ ಬದುಕಿ ಬಂದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ಹಿಂದಿನ ಫಿಟ್ನೆಸ್ ಮರಳಿ ಪಡೆಯಲು ದಿಟ್ಟ ಪರಿಶ್ರಮ ಪಟ್ಟ ಬಳಿಕ ಕೊನೆಗೂ 15 ತಿಂಗಳುಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನೂ ಮರಳಿ ಪಡೆದಿರುವ ಅವರು ತಂಡಕ್ಕೂ ಸ್ಫೂರ್ತಿಯ ಅಂಶವಾಗಿದ್ದಾರೆ.
ಉಳಿದಂತೆ ತಂಡ ಕಳೆದ ಸಲಕ್ಕಿಂತ ಹೆಚ್ಚಿನ ಬದಲಾವಣೆಯನ್ನೇನೂ ಕಂಡಿಲ್ಲ. ವಾರ್ನರ್, ಮಿಚೆಲ್ ಮಾರ್ಷ್, ಪೃಥ್ವಿ ಷಾರಂಥ ಬ್ಯಾಟಿಂಗ್ ತಾರೆಯರ ಜತೆ ಕುಲದೀಪ್ ಯಾದವ್-ಅರ್ ಪಟೇಲ್ ಎಡಗೈ ಸ್ಪಿನ್ ಜೋಡಿಯೂ ತಂಡದ ಪ್ರಮುಖ ಬಲ. ಇನ್ನುಳಿದಂತೆ ವೇಗದ ಬೌಲಿಂಗ್ ವಿಭಾಗದಲ್ಲಿ ಫಿಟ್ನೆಸ್ ಕಳವಳ ಹೆಚ್ಚಿರುವುದು ಹಿನ್ನಡೆಯಾಗಿದೆ.
ತಂಡ: ರಿಷಭ್ ಪಂತ್(ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಷಾ, ಮಿಚೆಲ್ ಮಾರ್ಷ್, ಅಕ್ಷರ್ ಪಟೇಲ್, ಶೈ ಹೋಪ್, ಟ್ರಿಸ್ಟಾನ್ ಸ್ಟಬ್ಸ್, ಜೇ ರಿಚರ್ಡ್ಸನ್, ಜೇಕ್ ಫ್ರೆಸರ್ ಮೆಕ್ಗುರ್ಕ್, ಯಶ್ ಧುಲ್, ಲಲಿತ್ ಯಾದವ್, ವಿಕಿ ಒಸ್ತ್ವಾಲ್, ಕುಲದೀಪ್ ಯಾದವ್, ಪ್ರವಿಣ್ ದುಬೆ, ಅನ್ರಿಚ್ ನೋಕಿಯಾ, ಖಲೀಲ್ ಅಹ್ಮದ್, ಇಶಾಂತ್ ಶರ್ಮ, ಮುಕೇಶ್ ಕುಮಾರ್, ಅಭಿಷೇಕ್ ಪೊರೆಲ್, ಕುಮಾರ್ ಕುಶಾಗ್ರ, ರಿಕಿ ಭುಯ್, ಸ್ವಸ್ತಿಕ್ ಚಿಕ್ರ, ರಸಿಕ್ ಸಲಮ್, ಸುಮಿತ್ ಕುಮಾರ್.