ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಬ್ ಗುಡ್​ಬೈ! ಚಾಂಪಿಯನ್ಸ್​ ಪಡೆ ಸೇರಲು ಪಂತ್​ ತಯಾರಿ?

ವಿಜಯವಾಣಿ - 2024-09-22T201957.440
Published on

ನವದೆಹಲಿ: ಭಾರತದಲ್ಲಿ ನಡೆಯುವ ಐಪಿಎಲ್​ಗೆ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಇಂಡಿಯನ್​​ ಪ್ರೀಮಿಯರ್​ ಲೀಗ್ ಕಣ್ತುಂಬಿಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳಂತೆ ಇತರೆ ದೇಶದ ಕ್ರಿಕೆಟ್ ಪ್ರಿಯರು ಕೂಡ ಕಾತರ ವ್ಯಕ್ತಪಡಿಸುತ್ತಾರೆ. ಈಗಾಗಲೇ ಐಪಿಎಲ್ 2025ರ 18ನೇ ಆವೃತ್ತಿ ಬಗ್ಗೆ ಭಾರೀ ಚರ್ಚೆಗಳು ಮುನ್ನೆಲೆಗೆ ಬಂದ ಬೆನ್ನಲ್ಲೇ ಮುಂದಿನ ತಿಂಗಳಲ್ಲಿ ನಡೆಯುವ ಹರಾಜು ಪ್ರಕ್ರಿಯೆ ಮೇಲೆ ಸದ್ಯ ಕ್ರೀಡಾಭಿಮಾನಿಗಳ ಕಣ್ಣು ಬಿದ್ದಿದೆ.

ಕಳೆದ ಕೆಲವು ತಿಂಗಳಿನಿಂದಲೂ 2025ರ ಐಪಿಎಲ್​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದ್ದು, ಸ್ಟಾರ್ ಆಟಗಾರ ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್​ ತೊರೆಯಲಿದ್ದಾರೆ ಎಂಬ ಸುದ್ದಿಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಇದರೊಟ್ಟಿಗೆ ಅನೇಕ ಸ್ಟಾರ್ ಆಟಗಾರರು ಈಗಿರುವ ಫ್ರಾಂಚೈಸಿಯಿಂದ ಬೇರೆ ಬೇರೆ ತಂಡಗಳನ್ನು ಸೇರಲಿದ್ದಾರೆ ಎಂಬ ಸುದ್ದಿಗಳು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ ಹಾಗೂ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಈಗಾಗಲೇ ಮುನ್ನೆಲೆಗೆ ಬಂದಿರುವ ಒಂದಷ್ಟು ಸ್ಟಾರ್ ಆಟಗಾರರ ಹೆಸರೇ ಸಾಕ್ಷಿ.

ಮುಂಬೈ ಇಂಡಿಯನ್ಸ್​ನಿಂದ ರೋಹಿತ್, ಲಖನೌ ಸೂಪರ್ ಜೈಂಟ್ಸ್​ನಿಂದ ಕೆ.ಎಲ್ ರಾಹುಲ್ ತಮ್ಮ ಫ್ರಾಂಚೈಸಿಗಳಿಂದ ಹೊರಬರಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ತಿಂಗಳಿನಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ರಿಷಬ್ ಪಂತ್​, ತಮ್ಮ ತಂಡವನ್ನು ಕೈಬಿಟ್ಟು ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಐದು ಬಾರಿ ಚಾಂಪಿಯನ್ಸ್​ ಆಗಿ ಮಿಂಚಿದ ಚೆನ್ನೈ ಸೂಪರ್​ ಸೂಪರ್ ಕಿಂಗ್ಸ್ ಪಡೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಸಲಿಗೆ ಇದೆಷ್ಟು ನಿಜ, ಎಷ್ಟು ಸುಳ್ಳು ಎಂಬುದು ಮಾತ್ರ ಇಲ್ಲಿಯವರೆಗೂ ಅಸ್ಪಷ್ಟ. ತಂಡದ ಮುಖವಾಣಿ ಆಗಿರುವ ರಿಷಬ್ ಪಂತ್​ರನ್ನು ಫ್ರಾಂಚೈಸಿ ಬಿಟ್ಟುಕೊಡಲಿದೆಯೇ ಅಥವಾ ಉಳಿಸಿಕೊಳ್ಳಲಿದೆಯೇ ಎಂಬುದೇ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net