ನಡೆದಾಡುವ ತನಕ ಐಪಿಎಲ್​ನಲ್ಲಿ ಆಡುವೆ; ಆರ್​ಸಿಬಿ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಸಂಕಲ್ಪ!

maxwell web
Published on

ಮೆಲ್ಬೋರ್ನ್​: ವೃತ್ತೀಜಿವನದ ಯಶಸ್ಸಿನಲ್ಲಿ ಐಪಿಎಲ್​ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ನನಗೆ ಎಲ್ಲಿಯವರೆಗೆ ನಡೆದಾಡಲು ಸಾಧ್ಯವೋ ಅಲ್ಲಿಯವರೆಗೆ ಐಪಿಎಲ್​ನಲ್ಲಿ ಆಡುವೆ ಎಂದು ಆಸ್ಟ್ರೆಲಿಯಾದ ಆಲ್ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಹೇಳಿದ್ದಾರೆ.

"ಬಹುಶಃ ಐಪಿಎಲ್​ ನಾನು ಜೀವನದಲ್ಲಿ ಆಡುವ ಕೊನೇ ಟೂರ್ನಿಯಾಗಿರುತ್ತದೆ. ನನಗೆ ಐಪಿಎಲ್​ನಿಂದ ಭಾರಿ ಲಾಭವಾಗಿದೆ. ಎಬಿ ಡಿವಿಲಿಯರ್ಸ್​, ವಿರಾಟ್​ ಕೊಹ್ಲಿ ಅವರಂಥ ಆಟಗಾರರ ಜತೆಗೆ 2 ತಿಂಗಳ ಕಾಲ ಆಡುವ ಅವಕಾಶ ಕಲ್ಪಿಸಿದೆ. ಅವರೊಂದಿಗೆ ಮಾತನಾಡುತ್ತ, ಆಡುತ್ತ ಸಾಕಷ್ಟು ಕಲಿತಿರುವೆ' ಎಂದು ಆರ್​ಸಿಬಿ ಆಟಗಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net