ನವದೆಹಲಿ: ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುತ್ತ ಬಂದಿರುವ ಇಂಗ್ಲೆಂಡ್ನ ಹ್ಯೂ ಎಡ್ಮೀಡ್ಸ್ ಈ ಬಾರಿ ಗೈರಾಗುತ್ತಿದ್ದಾರೆ. ಅವರ ಬದಲಿಗೆ ಹೊಸ ಹರಾಜುಗಾರರನ್ನು ಬಿಸಿಸಿಐ ಹುಡುತ್ತಿದ್ದು, ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಹರಾಜುಗಾರ್ತಿಗೆ ಹೊಣೆ ವಹಿಸುವ ಸಾಧ್ಯತೆ ಕಾಣಿಸಿದೆ.
ಮಹಿಳೆಯರ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯನ್ನು ಕಳೆದ ವರ್ಷ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಮಲ್ಲಿಕಾ ಸಾಗರ್, ಈ ಸಲವೂ ಡಿಸೆಂಬರ್ 9ರಂದು ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ. ನಂತರ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯ ಜವಾಬ್ದಾರಿಯನ್ನೂ ಅವರಿಗೆ ನೀಡಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ.
ಮುಂಬೈನಲ್ಲಿ ಕಲಾಕೃತಿಗಳ ಹರಾಜು ಪ್ರಕ್ರಿಯೆ ನಡೆಸಿದ ಅನುಭವ ಹೊಂದಿದ್ದ ಮಲ್ಲಿಕಾ ಸಾಗರ್ 2021ರಲ್ಲಿ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯನ್ನೂ ನಡೆಸಿದ್ದರು.
ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ಅವಳಿ ಅರ್ಧಶತಕದ ಮಿಂಚು!