

ಹೈದಾರಾಬಾದ್: ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೆ ಆಡಿರುವ ಒಟ್ಟು 8 ಪಂದ್ಯಗಳ ಪೈಕಿ ಏಳು ಮ್ಯಾಚ್ಗಳನ್ನು ಸೋತ್ತಿದ್ದು, ಒಂದೇ ಒಂದು ಪಂದ್ಯವನ್ನು ಮಾತ್ರ ತವರಿನಲ್ಲಿ ಗೆದ್ದಿತು. ಇಡೀ ಟೂರ್ನಿಯ ಪೂರ ಸತತ ಸೋಲು ಹಾಗೂ ಉತ್ತಮ ಪ್ರದರ್ಶನ ನೀಡದೆ ಇರುವುದು ಆರ್ಸಿಬಿಯ ಲಾಯಲ್ ಫ್ಯಾನ್ಸ್ಗಳನ್ನು ಇಂದಿಗೂ ಬೆಂಬಿಡದೆ ಕಾಡುತ್ತಿರುವ ಅತೀವ ಬೇಸರ.
16 ವರ್ಷಗಳಿಂದ ಐಪಿಎಲ್ ಕಪ್ ನೋಡದ ಆರ್ಸಿಬಿ, ಈ ಬಾರಿಯಾದರೂ ಹೊಸ ಅಧ್ಯಾಯ ಎಂದು ನುಡಿದಂತೆ ನಡೆಯುತ್ತಾರೆ, ಟ್ರೋಫಿ ಗೆದ್ದು, ನಮ್ಮನ್ನು ಹೆಮ್ಮೆ ಪಡಿಸುತ್ತಾರೆ ಎಂದೆಲ್ಲಾ ಅಭಿಮಾನಿಗಳು ಈ ಸೀಸನ್ ಆರಂಭಕ್ಕೂ ಮುನ್ನ ಅಪಾರ ಕನಸು ಕಂಡಿದ್ದರು. ಆದರೆ, ಇದೀಗ ಅದೆಲ್ಲವೂ ಭಗ್ನಗೊಂಡಿದೆ ಎಂಬುದನ್ನು ಅರಿತು ಮುಂದೆ ಹೋಗುವಷ್ಟರಲ್ಲೇ ತಂಡದ ಬ್ಯಾಟ್ಸ್ಮನ್ ವಿಲ್ ಜ್ಯಾಕ್ಸ್ ಇಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮೊದಲು ಶಾಕಿಂಗ್ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಇಂದು ಹೈದರಾಬಾದ್ನಲ್ಲಿ ಎಸ್ಆರ್ಎಚ್ ಮತ್ತು ಆರ್ಸಿಬಿ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿದ್ದು, ಈ ಪಂದ್ಯವನ್ನು ಫಾಫ್ ಪಡೆ ಏನಾದರೂ ಪವಾಡದ ರೀತಿಯಲ್ಲಿ ಗೆಲುವು ದಾಖಲಿಸಿದರೆ, ಖಂಡಿತ ಪ್ಲೇ-ಆಫ್ ಕನಸು ಹಸಿರಾಗುತ್ತದೆ ಎಂದು ಆರ್ಸಿಬಿ ಅಭಿಮಾನಿಗಳು ಆಶಿಸಿದ್ದಾರೆ. ಸದ್ಯ ಈ ವಿಚಾರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಭುಗಿಲೆದ್ದಿದ್ದು, ಇಂದು ಆರ್ಸಿಬಿಗೆ ಗೆಲುವು ಅನಿವಾರ್ಯ ಎಂಬಂತಾಗಿದೆ.
ಇನ್ನು ಪ್ಲೇ-ಆಫ್ ಬಗ್ಗೆ ಭವಿಷ್ಯ ನುಡಿದ ವಿಲ್ ಜ್ಯಾಕ್ಸ್, "ಹೊಸ ಬಾಲ್ನೊಂದಿಗೆ ವಿಕೆಟ್ ತೆಗೆಯಲು ಸತತ ಪ್ರಯತ್ನಗಳನ್ನು ಮಾಡಿದ್ದೇವೆ. ಖಂಡಿತವಾಗಿ ಅದೆಲ್ಲವೂ ನಮಗೆ ಫಲಿಸಲಿದೆ. ನಿಮಗೆ ಗೊತ್ತಿಲ್ಲ, ನಾವು ಮುಂದಿನ ಪಂದ್ಯ ಗೆದ್ದರೆ, ಬಳಿಕ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ. ಎಸ್ಆರ್ಎಚ್ ತಂಡದಲ್ಲಿ ಅತೀಯಾದ ವಿಶ್ವಾಸವಿದೆ. ಎಲ್ಲಾ ಬ್ಯಾಟ್ಸ್ಮನ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ. ಈಗ ತಮ್ಮ ತವರಲ್ಲೇ ಆಡ್ತಿದ್ದಾರೆ, ಇದು ಖಂಡಿತವಾಗಿಯೂ ಚಾಲೆಂಜಿಂಗ್ ಆಗಿದೆ. ಬೃಹತ್ ರನ್ ಗಳಿಸಿದಂತೆ ಅವರನ್ನು ಕಟ್ಟಿಹಾಕಿದ್ರೆ, ಗೆಲುವು ನಮ್ಮದೇ" ಎಂದಿದ್ದಾರೆ,(ಏಜೆನ್ಸೀಸ್).