More

  ಆಕೆಗೆ ತವರು ಮನೆ ಜವಾಬ್ದಾರಿ ಇದೆ! ತಂಗಿಗೆ ಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಿ: ಶಾಸಕ ಕಾಶಪ್ಪನವರ್ ಮನವಿ

  ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದದ್ದು, ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರಕ್ಕಿಳಿದು, ಜನರಲ್ಲಿ ಮತಯಾಚನೆ ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನು ಈ ಮಧ್ಯೆ ಬಾಗಲಕೋಟೆ ಲೋಕಸಭಾ ಅಖಾಡದಲ್ಲಿ ಚುನಾವಣಾ ರಂಗು ಕಾವೇರುತ್ತಿದ್ದು, ಸಚಿವ ಶಿವಾನಂದ ಪಾಟೀಲ್​ ಪುತ್ರಿ ಸಂಯುಕ್ತಾ ಪಾಟೀಲ್​ ಪರ ಕಾಂಗ್ರೆಸ್​ ನಾಯಕರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

  ಇದನ್ನೂ ಓದಿ: ಒಂದೇ ದಿನ 10 ಹುಡುಗರಿಗೆ ಕಿಸ್‌ ಮಾಡಿದ್ದೇನೆ; ಸ್ಟಾರ್​ ನಟಿಯ ಸೀಕ್ರೆಟ್​​ ರಿವೀಲ್

  ಸಂಯುಕ್ತಾ ಪರ ಪ್ರಚಾರಕ್ಕಿಳಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನನ್ನ ತಂಗಿಗೆ ಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಿ, ಆಕೆಗೆ ತವರು ಮನೆ ಜವಾಬ್ದಾರಿ ಇದೆ. ನನ್ನ ಪತ್ನಿ ವೀಣಾಗೆ ಟಿಕೆಟ್ ವಿಚಾರ ಮುಗಿದು ಹೋದ ಕತೆ. ಆ ಬಗ್ಗೆ ಯಾರೂ ಮಾತಾಡಬೇಡಿ, ಅದು ಅಂತ್ಯಕಂಡಿದೆ. ನಮ್ಮ‌ಅಭ್ಯರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾರೂ ವಿರುದ್ಧವಾಗಿ ಬರೆಯಬಾರದು ಎಂದು ಕಾರ್ಯಕರ್ತರಲ್ಲಿ ನಾನು ಮನವಿ ಮಾಡ್ತೇನೆ ಎಂದರು.

  ನಿಮ್ಮೆಲ್ಲರನ್ನು ನಂಬಿ, ನಾನು ನನ್ನ ತಂಗಿ ಸಂಯುಕ್ತಾಗೆ ತವರು ಮನೆ ಅಂತ ಮಾತು ಕೊಟ್ಟಿದ್ದೀನಿ. ಬರೀ ಗಂಡನ ಮನೆಗೆ ಅಷ್ಟೇ ಜವಾಬ್ದಾರಿ ಇರಲ್ಲ. ತವರು ಮನೆಯ ಜವಾಬ್ದಾರಿ ಹೆಚ್ಚು. ಈ ಸಲ ಹುನಗುಂದ ಕ್ಷೇತ್ರದಲ್ಲಿ ಸಂಯುಕ್ತಾಗೆ 40 ಸಾವಿರ ಲೀಡ್ ಕೊಡಿ ಎಂದು ಮತದಾರರಲ್ಲಿ ಶಾಸಕ ಕಾಶಪ್ಪನವರ್ ಮನವಿ ಮಾಡಿದರು.

  4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts