IPL 2024: ಕೋಲ್ಕತ ನೈಟ್​ರೈಡರ್ಸ್​​ಗೆ ಮತ್ತೆ ಕಪ್​ ಗೆದ್ದುಕೊಡುವರೇ ಗಂಭೀರ್​?​

web kkr web
Published on

ಕೋಲ್ಕತ: ಟೀಮ್​ ಇಂಡಿಯಾದ ಅವಳಿ ವಿಶ್ವಕಪ್​ ವಿಜೇತ ಮಾಜಿ ಎಡಗೈ ಆರಂಭಿಕ ಗೌತಮ್​ ಗಂಭೀರ್​ ಕೆಕೆಆರ್​ ತಂಡದ ನಾಯಕರಾಗಿ 2 ಬಾರಿ ಐಪಿಎಲ್​ ಪ್ರಶಸ್ತಿ ಗೆದ್ದುಕೊಂಡಿದ್ದರು. ಹೀಗಾಗಿ ಅವರು ಈ ಬಾರಿ ಮೆಂಟರ್​ ಆಗಿ 7 ವರ್ಷಗಳ ಬಳಿಕ ತಂಡಕ್ಕೆ ಮರಳಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಜತೆಗೆ ಆಸೀಸ್​ ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್​ಗೆ ಐಪಿಎಲ್​ ಇತಿಹಾಸದಲ್ಲೇ ಸರ್ವಾಧಿಕವೆನಿಸಿದ ಸರಿಸುಮಾರು 25 ಕೋಟಿ ರೂ. ಸಂಭಾವನೆ ನೀಡುತ್ತಿರುವುದರಿಂದ ತಂಡದ ಲೆಕ್ಕಾಚಾರವೂ ಕುತೂಹಲಕಾರಿಯಾಗಿದೆ.

ಇನ್ನು ಗಾಯದಿಂದಾಗಿ ಕಳೆದ ಆವೃತ್ತಿ ತಪ್ಪಿಸಿಕೊಂಡಿದ್ದ ಶ್ರೇಯಸ್​ ಅಯ್ಯರ್​ ಈ ಬಾರಿ ನಾಯಕರಾಗಿ ಮರಳಿದ್ದಾರೆ. ಉಳಿದಂತೆ ಕೆಕೆಆರ್​ ತಂಡ ಕಳೆದ ಆವೃತ್ತಿಯಲ್ಲಿ ಆಡಿದ ಬಹುತೇಕ ಪ್ರಮುಖ ಆಟಗಾರರನ್ನೇ ಹೊಂದಿದೆ. ಈ ಪೈಕಿ ರಿಂಕು ಸಿಂಗ್​ ಕಳೆದ ವರ್ಷದ ಫಿನಿಷರ್​ ಪಾತ್ರದ ಯಶಸ್ಸಿನಿಂದ ಈಗ ಟೀಮ್​ ಇಂಡಿಯಾ ಆಟಗಾರರೂ ಆಗಿದ್ದು, ಇನ್ನಷ್ಟು ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ.

ತಂಡ: ಶ್ರೇಯಸ್​ ಅಯ್ಯರ್​ (ನಾಯಕ), ನಿತೀಶ್​ ರಾಣಾ, ಮನೀಷ್​ ಪಾಂಡೆ, ವೆಂಕಟೇಶ್​ ಅಯ್ಯರ್​, ಫಿಲ್​ ಸಾಲ್ಟ್​, ರಹಮಾನುಲ್ಲಾ ಗುರ್ಬಜ್​, ರಿಂಕು ಸಿಂಗ್​, ಆಂಡ್ರೆ ರಸೆಲ್​, ಸುನೀಲ್​ ನಾರಾಯಣ್​, ವೈಭವ್​ ಅರೋರಾ, ಅನುಕೂಲ್​ ರಾಯ್​, ಶ್ರೀಕರ್​ ಭರತ್​, ದುಶ್ಮಂತ ಚಮೀರ, ಅಂಗಕ್ರಿಶ್​ ರುವಂಶಿ, ರಮಣ್​ ದೀಪ್​ ಸಿಂಗ್​, ಶೆಾರ್ನ್​ ರುದರ್​ಫೋರ್ಡ್​, ಮಿಚೆಲ್​ ಸ್ಟಾರ್ಕ್​, ಚೇತನ್​ ಸಕರಿಯಾ, ವರುಣ್​ ಚಕ್ರವರ್ತಿ, ಸುಯಶ್​ ಶರ್ಮ, ಹರ್ಷಿತ್​ ರಾಣಾ, ಸಕೀಬ್​ ಹುಸೇನ್​, ಮುಜೀಬ್​ ಉರ್​ ರೆಹಮಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net