IPL 2024: ನಾಯಕತ್ವ ಬದಲಾವಣೆ ಮುಂಬೈ ಇಂಡಿಯನ್ಸ್​ಗೆ ವರವೋ? ಶಾಪವೋ?

web mum web
Published on

ಮುಂಬೈ: ಕಳೆದ ವರ್ಗಾವಣೆ ಅವಧಿಯ ಬಳಿಕ ಭಾರಿ ಸುದ್ದಿಯಲ್ಲಿರುವ ತಂಡ ಮುಂಬೈ ಇಂಡಿಯನ್ಸ್​. ಸ್ಟಾರ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ, ತವರಿನ ಗುಜರಾತ್​ ತಂಡವನ್ನು ತ್ಯಜಿಸಿ ತನ್ನ ವೃತ್ತೀಜಿವನಕ್ಕೆ ಜೀವತುಂಬಿದ ತಂಡಕ್ಕೆ 2 ವರ್ಷಗಳ ಬಳಿಕ ಮರಳಿದಾಗ ಮುಂಬೈ ಅಭಿಮಾನಿಗಳು ಸಂಭ್ರಮಿಸಿದರು. ಆದರೆ, ಬಳಿಕ ಮುಂಬೈ ನಾಯಕತ್ವವನ್ನು ರೋಹಿತ್​ ಶರ್ಮರಿಂದ ಕಸಿದು ಹಾರ್ದಿಕ್​ಗೆ ನೀಡಿದಾಗ ಅಭಿಮಾನಿಗಳು ಇಬ್ಬಾಗವಾದರು. ಜತೆಗೆ ತಂಡದಲ್ಲೂ ಇದು ಒಡಕು ಮೂಡಿಸುವಂಥ ವಾತಾವರಣ ನಿರ್ಮಾಣವಾಯಿತು.

ನಂತರದಲ್ಲಿ ಫ್ರಾಂಚೈಸಿ ಎಷ್ಟೇ ತ್ಯಾಪೆ ಹಚ್ಚಿದರೂ, ಅದರ ನಿಜವಾದ ಒಗ್ಗಟ್ಟು ಈ ಬಾರಿ ಮೈದಾನದಲ್ಲಿ ಪ್ರದರ್ಶನಗೊಳ್ಳಬೇಕಿದೆ. ಹಾರ್ದಿಕ್​ಗಾಗಿ ಕ್ಯಾಮರಾನ್​ ಗ್ರೀನ್​ ಕೈಬಿಟ್ಟಿರುವ ಹೊರತಾಗಿ ತಂಡದಲ್ಲಿ ಬೇರಾವುದೇ ಪ್ರಮುಖ ಬದಲಾವಣೆ ಇಲ್ಲ. ಈ ಬಾರಿ ಬುಮ್ರಾ ಫಿಟ್​ ಆಗಿರುವುದು ಬೌಲಿಂಗ್​ಗೆ ಬಲ ತಂದಿದೆ.

ತಂಡ: ಹಾರ್ದಿಕ್​ ಪಾಂಡ್ಯ (ನಾಯಕ), ರೋಹಿತ್​ ಶರ್ಮ, ಸೂರ್ಯಕುಮಾರ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಟಿಮ್​ ಡೇವಿಡ್​, ಡಿವಾಲ್ಡ್​ ಬ್ರೇವಿಸ್​, ತಿಲಕ್​ ವರ್ಮ, ಇಶಾನ್​ ಕಿಶನ್​, ವಿಷ್ಣು ವಿನೋದ್​, ನೇಹಲ್​ ವಧೆರ, ಮೊಹಮದ್​ ನಬಿ, ಶ್ರೇಯಸ್​ ಗೋಪಾಲ್​, ರೋಮಾರಿಯೋ ಶೆರ್ಡ್​, ಅನ್ಶುಲ್​ ಕಾಂಬೊಜ್​, ನಮನ್​ ಧೀರ್​, ಅರ್ಜುನ್​ ತೆಂಡುಲ್ಕರ್​, ಶಮ್ಸ್​ ಮುಲಾನಿ, ಗೆರಾಲ್ಡ್​ ಕೋಟ್​ಜೀ, ಪೀಯುಷ್​ ಚಾವ್ಲಾ, ಕುಮಾರ್​ ಕಾರ್ತಿಕೇಯ, ಲೂಕ್​ ವುಡ್​, ಆಕಾಶ್​ ಮಧ್ವಲ್​, ದಿಲ್ಶಾನ್​ ಮಧುಶಂಕ, ನುವಾನ್​ ತುಷಾರ, ಶಿವಾಲಿಕ್​ ಶರ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net