IPL 2024: ತವರು ಮೈದಾನ ಬದಲಾವಣೆ ಪಂಜಾಬ್​ ಕಿಂಗ್ಸ್​ಗೆ ಅದೃಷ್ಟ ತರುವುದೇ?

web punjab web
Published on

ಮೊಹಾಲಿ: ಮೊದಲ ಆವೃತ್ತಿಯಿಂದ ಕಣದಲ್ಲಿದ್ದರೂ, ಪ್ರಶಸ್ತಿ ಗೆಲ್ಲದ 3 ತಂಡಗಳಲ್ಲಿ ಒಂದಾಗಿರುವ ಪಂಜಾಬ್​ ಕಿಂಗ್ಸ್​ ಪ್ರತಿ ಬಾರಿ ಟೂರ್ನಿಯಲ್ಲಿ ಉತ್ತಮ ಆರಂಭದ ಬಳಿಕ ಲಯ ತಪ್ಪುವ ಚಾಳಿ ಹೊಂದಿದೆ. ಎಡಗೈ ಆರಂಭಿಕ ಶಿಖರ್​ ಧವನ್​ ನಾಯಕತ್ವದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟಿದೆ. ಜತೆಗೆ ಕಳೆದ ಆವೃತ್ತಿಯ ಬಹುತೇಕ ಪ್ರಮುಖ ಆಟಗಾರರನ್ನು ಒಳಗೊಂಡಿದೆ. ಪಂಜಾಬ್​ ಕಿಂಗ್ಸ್​ ತಂಡ ತನ್ನ ತವರಿನ ತಾಣವನ್ನಾಗಿ ಮೊಹಾಲಿಯ ಐಎಸ್​ ಬಿಂದ್ರಾ ಸ್ಟೇಡಿಯಂ ಬದಲಿಗೆ ಮುಲ್ಲನ್​ಪುರದ ಹೊಸ ಪಿಸಿಎ ಕ್ರೀಡಾಂಗಣವನ್ನು ಆಯ್ದುಕೊಂಡಿದೆ. ಇದು ತಂಡದ ಅದೃಷ್ಟ ಬದಲಾಯಿಸುವ ನಿರೀಕ್ಷೆಯೂ ಇದೆ.

ಫಿಟ್ನೆಸ್​ ಸಮಸ್ಯೆಯಿಂದಾಗಿ ಕಳೆದ ಆವೃತ್ತಿ ತಪ್ಪಿಸಿಕೊಂಡಿದ್ದ ಇಂಗ್ಲೆಂಡ್​ ಬ್ಯಾಟರ್​ ಜಾನಿ ಬೇರ್​ಸ್ಟೋ ಈ ಬಾರಿ ಮರಳುತ್ತಿದ್ದಾರೆ. ಆದರೆ ಅವರ ಸದ್ಯದ ಫಾರ್ಮ್​ ಮಾತ್ರ ಕೆಟ್ಟದಾಗಿದೆ. ಆಲ್ರೌಂಡರ್​ಗಳಾದ ಸ್ಯಾಮ್​ ಕರನ್​, ಲಿಯಾಮ್​ ಲಿವಿಂಗ್​ಸ್ಟೋನ್​ ತಂಡಕ್ಕೆ ಸಮತೋಲನ ತರಲಿದ್ದಾರೆ. ದೊಡ್ಡ ಮಟ್ಟದ ನಿರೀಕ್ಷೆ ಇಲ್ಲದಿರುವುದು ತಂಡಕ್ಕೆ ಈ ಸಲ ವರವೂ ಆಗಬಹುದು.

ತಂಡ: ಶಿಖರ್​ ಧವನ್​(ನಾಯಕ), ಪ್ರಭ್​ಸಿಮ್ರನ್​ ಸಿಂಗ್​, ಜಿತೇಶ್​ ಶರ್ಮ, ಸಿಕಂದರ್​ ರಾಜಾ, ನಾಥನ್​ ಎಲ್ಲಿಸ್​, ರಿಷಿ ಧವನ್​, ಲಿಯಾಮ್​ ಲಿವಿಂಗ್​ಸ್ಟೋನ್​, ಅಥರ್ವ ತೈಡೆ, ಅರ್ಷದೀಪ್​ ಸಿಂಗ್​, ಸ್ಯಾಮ್​ ಕರನ್​, ಕಗಿಸೊ ರಬಾಡ, ಹರ್​ಪ್ರೀತ್​ ಬ್ರಾರ್​, ರಾಹುಲ್​ ಚಹರ್​, ಅಶುತೋಷ್​ ಶರ್ಮ, ಹರ್​ಪ್ರೀತ್​ ಭಾಟಿಯಾ, ಹರ್ಷಲ್​ ಪಟೇಲ್​, ಜಾನಿ ಬೇರ್​ಸ್ಟೋ, ಕ್ರಿಸ್​ ವೋಕ್ಸ್​, ಶಶಾಂಕ್​ ಸಿಂಗ್​, ವಿದ್ವತ್​ ಕಾವೇರಪ್ಪ, ತನಯ್​ ತ್ಯಾಗರಾಜನ್​, ವಿಶ್ವನಾಥ್​ ಪ್ರತಾಪ್​ ಸಿಂಗ್​, ಪ್ರಿನ್ಸ್​ ಚೌಧರಿ, ಶಿವಂ ಸಿಂಗ್​, ರಿಲೀ ರೋಸ್ಸೋ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net