

RCB : ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನ ಸೀಸನ್ 18 ಆರಂಭವಾಗಿದೆ. ಇನ್ನು ಈ ಬಾರಿಯ ರಾಯಲ್ ಚಾಲೆಂಚರ್ಸ್ ಬೆಂಗಳೂರು(RCB) ತಂಡದ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್(Andy Flower) ಅನ್ನು ಉಳಿಸಿಕೊಂಡಿದೆ. ಆಂಡಿ ಫ್ಲವರ್ ಒಬ್ಬ ಆನುಭವಿ ತರಬೇತಿದಾರ. ಅವರು ಹಲವಾರು ಅಂತರಾಷ್ಟ್ರೀಯ ಮತ್ತು ಲೀಗ್ನ ಪ್ರಾಂಚೈಸಿ ತಂಡಗಳನ್ನು ಯಶಸ್ವಿಯಾಗಿ ಮುನ್ನೇಡಿಸಿದ್ದಾರೆ. ಹೀಗಾಗಿ, ಆರ್‌ಸಿಬಿ ಮಖ್ಯ ಕೋಚ್ ಆಗಿ ಇದೀಗ ಆಂಡಿ ಫ್ಲವರ್ ಪಡೆಯುತ್ತಿರುವ ವೇತನ ಎಷ್ಟು ಗೊತ್ತೆ? ಇಲ್ಲಿದೆ ಮಾಹಿತಿ..
ವರದಿಗಳ ಪ್ರಕಾರ, ಆಂಡಿ ಫ್ಲವರ್ ಆರ್‌ಸಿಬಿಯಲ್ಲಿ ಮುಖ್ಯ ಕೋಚ್ ಪಾತ್ರಕ್ಕಾಗಿ ಪ್ರತಿ ಆವೃತ್ತಿಗೆ ಸುಮಾರು 4-5 ಕೋಟಿ ರೂ.ಗಳ ಸಂಭಾವನೆ ಪಡೆಯುತ್ತಿದ್ದಾರೆ. ಅವರ ಹಿಂದಿನ ಅನುಭವ ಮತ್ತು ತಂಡಕ್ಕೆ ಉತ್ತಮ ಕಾರ್ಯತಂತ್ರವನ್ನು ಒದಗಿಸುವ ಸಾಮರ್ಥ್ಯವನ್ನು ಪರಿಗಣಿಸಿ ಈ ಮೊತ್ತವನ್ನು ನಿರ್ಧರಿಸಲಾಗಿದೆ. ಐಪಿಎಲ್‌ನಲ್ಲಿ ಮುಖ್ಯ ತರಬೇತುದಾರರ ವೇತನವನ್ನು ಫ್ರಾಂಚೈಸಿಯ ನೀತಿ ಮತ್ತು ತರಬೇತುದಾರರ ಅನುಭವದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಆಂಡಿ ಫ್ಲವರ್ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ. ಅವರು ವಿಶ್ವದ ಅತ್ಯುತ್ತಮ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
1. ಇಂಗ್ಲೆಂಡ್ ತಂಡದ ತರಬೇತುದಾರ(2009-2014): ಈ ಅವಧಿಯಲ್ಲಿ ಟೀಮ್ ಇಂಗ್ಲೆಂಡ್ ಆಶಿಶ್ ಕಪ್ ಗೆಲ್ಲುವ ಮೂಲಕ ಟೆಸ್ಟ್ನಲ್ಲಿ ನಂ.1 ತಂಡವಾಯಿತು.
2.ಪಿಎಸ್ಎಲ್ ಮತ್ತು ಟಿ-20 ತಂಡಗಳ ಅನುಭವ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ಮತ್ತು ಇತರ ಹಲವು ಟಿ-20 ಲೀಗ್ಗಳಲ್ಲಿ ತರಬೇತುದಾರರಾಗಿ ಅನುಭವ ಹೊಂದಿದ್ದಾರೆ.
3.LSG ತಂಡ ಮುಖ್ಯ ತರಬೇತುದಾರ(2022-23): ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸತತವಾಗಿ ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ, ಮತ್ತು ಆಂಡಿ ಫ್ಲವರ್ ನಾಯಕತ್ವದಲ್ಲಿ ತಂಡವು ಈ ಬಾರಿ ಇತಿಹಾಸ ಸೃಷ್ಟಿಸಬಹುದು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ತರಬೇತಿ ನೀಡುವಲ್ಲಿ ಅಪಾರ ಅನುಭವ ಹೊಂದಿದ್ದು, ಇದು ಆರ್‌ಸಿಬಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.(ಏಜೆನ್ಸೀಸ್)