

ಹೈದರಾಬಾದ್: 2017ರಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದರೂ ಕ್ರಿಕೆಟ್ ಶಿಶು ಎಂದೇ ಕರೆಯಲ್ಪಡುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ್ದು ಜೂನ್ 27ರಂದು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ತಮ್ಮ ತಂಡ ಸೆಮಿಫೈನಲ್ ಪ್ರವೇಶಿಸುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಖುದ್ದು ತಾಲಿಬಾನ್ ಆಡಳಿತವೇ ತಂಡದ ಸದಸ್ಯರಿಗೆ ಕರೆ ಮಾಡಿ ಅಭಿನಂದಿಸಿದೆ. ಆದರೆ, ಈ ವಿಚಾರವಾಗಿ ಮಾತನಾಡಿರುವ ಅಂಬಾಟಿ ರಾಯುಡು ಅಫ್ಘಾನಿಸ್ತಾನ ಅಭಿಮಾನಿಗಳ ನಡೆಯನ್ನು ಟೀಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಫಾರ್ಮಿನಲ್ಲಿರುವ ಆಟಗಾರರ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಟೀಕೆಗೆ ಗುರಿಯಾಗಿರುವ ಅಂಬಾಟಿ ರಾಯುಡು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ಕೂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಹೇಳಿಕೆ ನೀಡುವ ಸುದ್ದಿಯಾಗಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಾಯುಡು, ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ನಂತಹ ತಂಡಗಳನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿರುವುದು ಶ್ಲಾಘನೀಯ. ಆದರೆ, ನನಗೆ ಅರ್ಥವಾಗದೇ ವಿಚಾರ ಏನೆಂದರೆ ಅಫ್ಘಾನಿಸ್ತಾನದ ಅಭಿಮಾನಿಗಳು ತಮ್ಮ ತಂಡ ಸೆಮಿಫೈನಲ್ ಪ್ರವೇಶಿಸಿರುವ ವಿಚಾರವನ್ನು ವಿಶ್ವಕಪ್ ಗೆದ್ದಂತೆ ಯಾಕೆ ಸಂಭ್ರಮಿಸುತ್ತಿದ್ದಾರೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.
ಇತ್ತ ಅಂಬಾಟಿ ರಾಯುಡು ಹೇಳಿಕೆಗೆ ಕಿಡಿಕಾರಿರುವ ನೆಟ್ಟಿಗರು ನೀವು ಹೊಗಳಿದ್ದಕ್ಕಿಂತ ಬೇರೆ ಅವರನ್ನು ದೂಷಿಸಿದ್ದೆ ಜಾಸ್ತಿ. ಕ್ರಿಕೆಟ್ಗೆ ನಿಮ್ಮ ಹಾಗೂ ಫೂಟ್ಬಾಲ್ಗೆ ನಟ ಕಾರ್ತಿಕ್ ಆರ್ಯನ್ ಕೊಡುಗೆ ಎರಡು ಒಂದೇ ನೀವು ದಯವಿಟ್ಟು ಇನ್ನು ಮುಂದೆ ಪ್ಯಾನೆಲ್ನಲ್ಲಿ ಮಾತನಾಡಲು ಬರಬೇಡಿ ಎಂದು ನೆಟ್ಟಿಗರು ಕಮೆಂಟ್ ಹಾಕಿ ಕಿಡಿಕಾರಿದ್ದಾರೆ.