ಸಿಎಸ್​ಕೆ ವಿರುದ್ಧ ಕಂಡ ಸೋಲಿನ ಬಗ್ಗೆ ರಿಷಭ್​ ಪಂತ್​ ಹೇಳಿದ್ದಿಷ್ಟು...

web pant
Published on

ಲಖನೌ: ನಿರಂತರ ವಿಕೆಟ್​ಗಳನ್ನು ಕಳೆದುಕೊಂಡೆವು. ದೊಡ್ಡ ಜತೆಯಾಟಗಳು ಸಿಗಲಿಲ್ಲ. ಇದರಿಂದ ನಾವು 10&15 ರನ್​ ಕೊರತೆ ಅನುಭವಿಸಿದೆವು ಎಂದು ಲಖನೌ ಸೂಪರ್​ಜೈಂಟ್ಸ್​ ನಾಯಕ ರಿಷಭ್​ ಪಂತ್​ ಸಿಎಸ್​ಕೆ ವಿರುದ್ಧದ 5 ವಿಕೆಟ್​ ಸೋಲಿಗೆ ಕಾರಣ ವಿವರಿಸಿದ್ದಾರೆ.

ಆರಂಭಿಕ ಆಘಾತದ ಬಳಿಕ ಪಂತ್​ (63) ಆಸರೆಯಲ್ಲಿ ಲಖನೌ 7 ವಿಕೆಟ್​ಗೆ 166 ರನ್​ ಪೇರಿಸಿದರೆ, ಸಿಎಸ್​ಕೆ 19.3 ಓವರ್​ಗಳಲ್ಲಿ 5 ವಿಕೆಟ್​ಗೆ 168 ರನ್​ ಗಳಿಸಿ ಜಯಿಸಿತು. ಹೊಸ ಆರಂಭಿಕ ಜೋಡಿಯಾದ ಶೇಕ್​ ರಶೀದ್​ (27) ಮತ್ತು ರಚಿನ್​ ರವೀಂದ್ರ (37) ಉತ್ತಮ ಆರಂಭ ಒದಗಿಸಿದ ಬಳಿಕ ಸಿಎಸ್​ಕೆ ಮಧ್ಯಮ ಕ್ರಮಾಂಕ ಕುಸಿಯಿತು. ಸತತ 6ನೇ ಸೋಲಿನ ಭೀತಿ ಎದುರಾದಾಗ, ಇಂಪ್ಯಾಕ್ಟ್​ ಪ್ಲೇಯರ್​ ಶಿವಂ ದುಬೆ (43*) ಮತ್ತು ನಾಯಕ ಎಂಎಸ್​ ಧೋನಿ (26*) ಮುರಿಯದ 6ನೇ ವಿಕೆಟ್​ಗೆ 28 ಎಸೆತಗಳಲ್ಲಿ 57 ರನ್​ ಸೇರಿಸಿ ಗೆಲುವಿನ ದಡ ಸೇರಿಸಿದರು.

"ನನ್ನ ಬ್ಯಾಟಿಂಗ್​ ಪಂದ್ಯದಿಂದ ಪಂದ್ಯಕ್ಕೆ ಸುಧಾರಿಸುತ್ತಿದೆ. ಲಯಕ್ಕೆ ಮರಳಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಪಂತ್​ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿದ ಬಗ್ಗೆ ಸಂಭ್ರಮಿಸಿದ್ದಾರೆ.

*43: ಧೋನಿ (43 ವರ್ಷ, 281) ಐಪಿಎಲ್​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತಿ ಹಿರಿಯ ಆಟಗಾರ ಎನಿಸಿದರು. ಪ್ರವಿಣ್​ ತಾಂಬೆ (43 ವರ್ಷ, 60 ದಿನ) ಹಿಂದಿನ ಅತಿಹಿರಿಯ ಸಾಧಕ.

*18: ಧೋನಿ ಐಪಿಎಲ್​ನಲ್ಲಿ 18ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವಿರಾಟ್​ ಕೊಹ್ಲಿ ಸಾಧನೆ ಸರಿಗಟ್ಟಿದರು. ರೋಹಿತ್​ ಶರ್ಮ 19 ಬಾರಿ ಈ ಗೌರವ ಪಡೆದಿರುವುದು ಭಾರತೀಯ ದಾಖಲೆ.

*ಗೆಲುವಿನ ಹಾದಿಗೆ ಮರಳಿರುವುದು ಖುಷಿ ನೀಡಿದೆ ಮತ್ತು ಆತ್ಮವಿಶ್ವಾಸ ತುಂಬಿದೆ. ಇದೇ ಲಯ ಕಾಯ್ದುಕೊಳ್ಳಲು ಬಯಸಿದ್ದೇವೆ. ತವರಿನಲ್ಲೂ ನಮಗೆ ಉತ್ತಮ ಪಿಚ್​ ಲಭಿಸಬೇಕಿದೆ. ನಾವು ಬ್ಯಾಟಿಂಗ್​ ವಿಭಾಗದಲ್ಲಿ ಕ್ರಮಾಂಕ ಬದಲಾವಣೆ ಮಾಡುವುದು ಅಗತ್ಯವಾಗಿತ್ತು.

| ಎಂಎಸ್​ ಧೋನಿ ಸಿಎಸ್​ಕೆ ನಾಯಕ

150: ರಿಷಭ್​ ಪಂತ್​ ಐಪಿಎಲ್​ನಲ್ಲಿ 150 ಸಿಕ್ಸರ್​ ಸಿಡಿಸಿದ 2ನೇ ವಿಕೆಟ್​ ಕೀಪರ್​&ಬ್ಯಾಟರ್​ ಎನಿಸಿದರು. ಎಂಎಸ್​ ಧೋನಿ (254) ಮೊದಲ ಸಾಧಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net