ಐಪಿಎಲ್​ಗೆ ಕರ್ನಾಟಕದ ಮತ್ತೋರ್ವ ಆಟಗಾರ ಸೇರ್ಪಡೆ; ಸನ್​ರೈಸರ್ಸ್​ ತಂಡದಲ್ಲಿ ಸ್ಥಾನ!

web smaran
Published on

ಬೆಂಗಳೂರು: ಕರ್ನಾಟಕದ ಬ್ಯಾಟರ್​ ಆರ್​. ಸ್ಮರಣ್​ ಗಾಯಗೊಂಡಿರುವ ಸ್ಪಿನ್ನರ್​ ಆಡಂ ಜಂಪಾ ಬದಲಿಗೆ ಸನ್​ರೈಸರ್ಸ್​ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಐಪಿಎಲ್​ 18ನೇ ಆವೃತ್ತಿಯಲ್ಲಿ ಆಡುವ ಕನ್ನಡಿಗರ ಸಂಖ್ಯ 14ಕ್ಕೆ ಏರಿಕೆಯಾಗಿದೆ.

ಗಾಯದಿಂದಾಗಿ ಐಪಿಎಲ್​ನಿಂದ ಹೊರಬಿದ್ದಿರುವ ನಾಯಕ ಋತುರಾಜ್​ ಗಾಯಕ್ವಾಡ್​ ಸ್ಥಾನಕ್ಕೆ ಮುಂಬೈನ 17 ವರ್ಷದ ಬ್ಯಾಟರ್​ ಆಯುಷ್​ ಮಹಾತ್ರೆ ಸಿಎಸ್​ಕೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇಬ್ಬರೂ ತಲಾ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ.

21 ವರ್ಷದ ಎಡಗೈ ಬ್ಯಾಟರ್​ ರವಿಚಂದ್ರನ್​ ಸ್ಮರಣ್​ ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕರ್ನಾಟಕ ತಂಡದ ಪರ ಮಿಂಚಿದ್ದರು. 7 ಪ್ರಥಮ ದರ್ಜೆ, 10 ಲಿಸ್ಟ್​ ಎ ಮತ್ತು 6 ಟಿ20 ಪಂದ್ಯಗಳಲ್ಲಿ ಅವರು 1,100ಕ್ಕೂ ಅಧಿಕ ರನ್​ ಬಾರಿಸಿದ್ದರು.

ಐಪಿಎಲ್​ನಲ್ಲಿ ಈಗಾಗಲೆ ಇರುವ ಕನ್ನಡಿಗರು:

ಸಿಎಸ್​ಕೆ: ಶ್ರೇಯಸ್​ ಗೋಪಾಲ್​ (30 ಲಕ್ಷ)

ಡೆಲ್ಲಿ: ಕೆಎಲ್​ ರಾಹುಲ್​ (14 ಕೋಟಿ), ಕರುಣ್​ ನಾಯರ್​ (50 ಲಕ್ಷ), ಮನ್ವಂತ್​ ಕುಮಾರ್​ (30 ಲಕ್ಷ).

ಗುಜರಾತ್​: ಪ್ರಸಿದ್ಧಕೃಷ್ಣ (9.50 ಕೋಟಿ).

ಕೆಕೆಆರ್​: ಮನೀಷ್​ ಪಾಂಡೆ (75 ಲಕ್ಷ), ಲವನೀತ್​ ಸಿಸೋಡಿಯಾ (30 ಲಕ್ಷ).

ಮುಂಬೈ: ಕೆಎಲ್​ ಶ್ರೀಜಿತ್​ (30 ಲಕ್ಷ).

ಪಂಜಾಬ್​: ವೈಶಾಕ್​ ವಿಜಯ್​ಕುಮಾರ್​ (1.80 ಕೋಟಿ), ಪ್ರವಿಣ್​ ದುಬೆ (30 ಲಕ್ಷ).

ಆರ್​ಸಿಬಿ: ದೇವದತ್​ ಪಡಿಕ್ಕಲ್​ (2 ಕೋಟಿ), ಮನೋಜ್​ ಭಾಂಡಗೆ (30 ಲಕ್ಷ).

ಸನ್​ರೈಸರ್ಸ್​: ಅಭಿನವ್​ ಮನೋಹರ್​ (3.20 ಕೋಟಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net