

ಇಂಡಿಯನ್ ಪ್ರೀಮಿಯರ್ ಲೀಗ್( IPL 2025)ನ 18ನೇ ಆವೃತ್ತಿಯ ಪ್ರಶಸ್ತಿಗಾಗಿ ಇಂದು(ಜೂ.3) ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಯಾರು ಕಪ್ ಗೆಲ್ಲಿದ್ದಾರೆ ಎಂದು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಈ ಬಾರಿಯ ಐಪಿಎಲ್ ಪ್ರಶಸ್ತಿಗಾಗಿ ಎರಡೂ ಹೊಸ ತಂಡಗಳು ಪೈಪೋಟಿ ನಡೆಸುತ್ತಿವೆ. ಆರ್‌ಸಿಬಿ 9 ವರ್ಷಗಳ ನಂತರ ಫೈನಲ್ ತಲುಪಿದ್ದರೆ, ಪಂಜಾಬ್ ಕಿಂಗ್ಸ್ ಇಲ್ಲಿಗೆ ತಲುಪಲು 11 ವರ್ಷಗಳು ಬೇಕಾಯಿತು. ಅಂದರೆ ಎರಡರ ನಡುವೆ ಕಠಿಣ ಸ್ಪರ್ಧೆಯನ್ನು ಕಾಣಬಹುದು. ಇದೀಗ ಎಲ್ಲರ ಕಣ್ಣು ಟ್ರೋಫಿ ಮೇಲೆ ಇದೆ. ಅದಗ್ಯೂ ಲೀಗ್‌ನ ಹೊರತಾಗಿ, ಐಪಿಎಲ್ ಅಭಿಮಾನಿಗಳು ವಿಜೇತ ತಂಡಕ್ಕೆ ಸಿಗುವ ಹೊಳೆಯುವ ಟ್ರೋಫಿಯ ಬಗ್ಗೆಯೂ ತುಂಬಾ ಆಸಕ್ತಿ ಹೊಂದಿದ್ದಾರೆ. ಜನರು ಗೂಗಲ್‌ನಲ್ಲಿ ಅದರ ಬೆಲೆಯಿಂದ ಹಿಡಿದು ವಿನ್ಯಾಸದವರೆಗೆ ಹಲವು ವಿಷಯಗಳನ್ನು ಹುಡುಕುತ್ತಾರೆ. ಆದರೆ, ಟ್ರೋಫಿ ಮೇಲೆ ಸಂಸ್ಕೃತದಲ್ಲಿ ಬರೆದ ಒಂದು ಸಾಲಿನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ ಎಂದೇ ಹೇಳಬಹುದು.
ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ಬರೆಯಲಾಗಿದೆ. "ಯಾತ್ರ ಪ್ರತಿಭಾ ಅವಸರಂ ಪ್ರಾಪ್ನೋತಿ" ಇದರ ಅರ್ಥ "ಪ್ರತಿಭೆಗೆ ಅವಕಾಶ ಸಿಗುವ ಸ್ಥಳ". ಅಂದರೆ, ಐಪಿಎಲ್ ಪ್ರತಿಭೆಗೆ ಅವಕಾಶ ನೀಡುವ ವೇದಿಕೆಯಾಗಿದೆ. ಈ ಐಪಿಎಲ್ ಟ್ರೋಫಿಯನ್ನು ಇನ್ನಷ್ಟು ಸುಂದರಗೊಳಿಸಲು, ಅದರ ಮೇಲೆ ಚಿನ್ನದ ಪದರವನ್ನು ಹಚ್ಚಲಾಗುತ್ತದೆ ಮತ್ತು ವಿಜೇತ ತಂಡಗಳ ಹೆಸರುಗಳನ್ನು ಸಹ ಅದರ ಮೇಲೆ ಕೆತ್ತಲಾಗಿದೆ.(ಏಜೆನ್ಸೀಸ್)