'ಈ ಸಲ ಕಪ್​​ ನಮ್ದೇ' ಎಂದು RCB ಪರ 6 ಕೋಟಿ ರೂ. ಬೆಟ್ಟಿಂಗ್​​ ಕಟ್ಟಿದ ವಿದೇಶಿ ವ್ಯಕ್ತಿ?

dk - 2025-06-03T124519.410
Published on

ಇಂಡಿಯನ್​ ಪ್ರೀಮಿಯರ್ ಲೀಗ್​( IPL 2025)ನ 18ನೇ ಆವೃತ್ತಿಯ ಪ್ರಶಸ್ತಿಗಾಗಿ ಇಂದು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು(RCB) ಮತ್ತು ಪಂಜಾಬ್​​​ ಕಿಂಗ್ಸ್​​ ನಡುವೆ ಫೈನಲ್​​ ಪಂದ್ಯ ನಡೆಯಲಿದೆ.

ಇಂದು ನಡೆಯುವ ಈ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕೂತುಹಲ ಮೂಡಿತ್ತು. ಇನ್ನು ಆರ್​ಸಿಬಿ ಪರ 'ಈ ಸಲ ಕಪ್​​ ನಮ್ದೇ' ಎಂದು ಇಂಟರ್ನೆಟ್​​ನಲ್ಲಿ ಸಾಕಷ್ಟು ಟ್ರೆಂಡ್​ ಆಗುತ್ತಿದೆ. ಇದರ ನಡುವೆ ಕೆನಡಾದ ರ್ಯಾಪರ್ ಡ್ರೇಕ್​​ ಆರ್​ಸಿಬಿ ಪರ ಬೆಂಬಲವಾಗಿ ನಿಂತಿದ್ದಾರೆ. ಆರ್​ಸಿಬಿ ಅವರು ಲಕ್ಷಾಂತರ ಬೆಟ್​​ ಕಟ್ಟಿದ್ದಾರೆ. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬೆಟಿಂಗ್​​ ಕಟ್ಟಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ.

ಮಂಗಳವಾರ ಡ್ರೇಕ್ ಇನ್ಸ್ಟಾಗ್ರಾಮ್ ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಆರ್ಸಿಬಿ ಐಪಿಎಲ್ 2025 ಗೆಲ್ಲುವುದರ ಮೇಲೆ 7,50,000 ಅಮೆರಿಕನ್ ಡಾಲರ್ ಅಂದರೆ 6,41,08,974 ರೂ. ಬೆಟ್ ಇಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಈ ಸಲ ಕಪ್​ ನಮ್ದೇ ಎಂದು ಬರೆದುಕೊಂಡಿದ್ದಾರೆ.

ಆದರೆ, ಈ ಪರಿ ಬೆಟ್ಟಿಂಗ್​ ಕಟ್ಟಿರುವುದರ ಬಗ್ಗೆ ಅಲ್ಲಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಅಲ್ಲಿ ಅಂದರೆ ಉತ್ತರ ಅಮೆರಿಕಾದಲ್ಲಿ ಕ್ರಿಕೆಟ್​​ ಜನಪ್ರಿಯ ಕ್ರೀಡೆ ಅಲ್ಲ. ಹೀಗಾಗಿ, ಅಲ್ಲಿನ ಜನರಿಗೆ ಇತನ ಬೆಟ್ಟಿಂಗ್​ ಹುಬ್ಬೆರುವಂತೆ ಮಾಡಿದೆ.

ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಒಟ್ಟು 36 ಪಂದ್ಯಗಳು ನಡೆದಿದ್ದು, ಎರಡೂ ತಂಡಗಳು ತಲಾ 18 ಬಾರಿ ಗೆದ್ದಿವೆ. ಕಳೆದ 10 ಪಂದ್ಯಗಳನ್ನು ನೋಡಿದರೆ, ಆರ್‌ಸಿಬಿ 6 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ 4 ಪಂದ್ಯಗಳನ್ನು ಗೆದ್ದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net