

Tendulkar : ಭಾರತದ ಮಾಜಿ ಕ್ರಿಕೆಟಿಗ ಸಚಿತ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬುಧವಾರ (ಆಗಸ್ಟ್ 13) ಸಾನಿಯಾ ಚಾಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತೆಂಡೂಲ್ಕರ್ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಸಮಾರಂಭದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ಕುರಿತಾದ ಸುದ್ದಿ ಮತ್ತು ಒಂದಿಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
25ರ ವರ್ಷದ ಅರ್ಜುನ್ ಅವರ ನಿವ್ವಳ ಲಾಭ ಏನು? ಆಸ್ತಿ ಎಷ್ಟು? ಕ್ರಿಕೆಟ್ನಿಂದ ಎಷ್ಟು ಸಂಪಾದಿಸುತ್ತಿದ್ದಾರೆ ಎಂಬುದು ತಿಳಿಯೋಣ..
ಅಪ್ಪನಂತೆ ಅರ್ಜುನ್ ವೃತ್ತಿ ಜೀವನ ಕೂಡ ಕ್ರಿಕೆಟ್. ಅವರು ಎಡಗೈ ಬೌಲರ್ ಮತ್ತು ಬ್ಯಾಟರ್. 1999ರ ಸೆ.25ರಂದು ಜನಿಸಿದ ಅರ್ಜುನ್, 13 ವರ್ಷದಲ್ಲಿಯೇ ಪುಣೆ ಪರ ಪಾದಾರ್ಪಣೆ ಮಾಡಿದ್ದರು. 2021ರ ಜನವರಿ 15ರಂದು ಮೊದಲ ಬಾರಿಗೆ ಮುಂಬೈ ತಂಡದ ಪರ ಟಿ-20ಗೆ ಪಾದಾರ್ಪಣೆ ಮಾಡಿದರು. ಹರಿಯಾಣ ವಿರುದ್ಧ ಮೂರು ಓವರ್ಗಳಲ್ಲಿ 34 ರನ್ಗಳಿಗೆ 1 ವಿಕೆಟ್ ಪಡೆದರು. ಇದೀಗ ಅರ್ಜುನ್ ಗೋವಾ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರ IPL ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, 2021ರಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಟೀಮ್ಗೆ ಸೇರ್ಪಡೆಯಾದರು. 20 ಲಕ್ಷ ರೂ,ಗೆ ತಂಡಕ್ಕೆ ಪಾದಾರ್ಪಣೆ ಮಾಡಿದರು. ಆದರೆ, ಗಾಯದ ಕಾರಣದಿಂದಾಗಿ ಮೊದಲ ಋತುವಿನಲ್ಲಿ ಆಡಲೇ ಇಲ್ಲ. 2022ರಲ್ಲಿ ಮತ್ತೆ 30 ಲಕ್ಷ ರೂ, ಗೆ ಮರಳಿ ತಂಡಕ್ಕೆ ಸೇರಿದರೂ ಬೆಂಚ್ನಲ್ಲಿಯೇ ಕಾಯಬೇಕಾಯಿತು. 2023ರಲ್ಲಿ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡ ಅರ್ಜುನ್, ನಾಲ್ಕು ಪಂದ್ಯಗಳನ್ನು ಆಡಿದರು. ಅಲ್ಲದೆ, ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದರು. 2024ರಲ್ಲಿ ಒಂದು ಪಂದ್ಯವನ್ನು ಮಾತ್ರ ಆಡಿದರು. 2025ರಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡಲಿಲ್ಲ. ಆದಾಗ್ಯೂ, IPLನ ಒಟ್ಟು 5 ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದು, ಕೇವಲ 13 ರನ್ ಮಾತ್ರ ಬಾರಿಸಿದ್ದಾರೆ.
ವರದಿಗಳ ಪ್ರಕಾರ, ಅರ್ಜುನ್ ಒಟ್ಟು ನಿವ್ವಳ ಮೌಲ್ಯ ಸುಮಾರು 22 ಕೋಟಿ ರೂ ಆಗಿದೆ. ಮುಂಬೈ ಇಂಡಿಯನ್ಸ್ ಪ್ರತಿ IPL ಋತುವಿಗೆ 30 ಲಕ್ಷ ರೂ. ಪಡೆಯುತ್ತಿದ್ದಾರೆ. ಅಲ್ಲದೆ, ದೇಶಿಯ ಕ್ರಿಕೆಟ್ ಆಡುವ ಮೂಲಕ ವಾರ್ಷಿಕ 10 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ. ಜತೆಗೆ ಅನೇಕ ಬ್ರ್ಯಾಂಡ್ ಅನುಮೋದನೆಗಳನ್ನು ಸಹ ಮಾಡುತ್ತಾರೆ. ಇನ್ನು ತಂ ದೆ ಸಚಿನ್ ತೆಂಡೂಲ್ಕರ್ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 1400 ಕೋಟಿ ರೂ. ಆಗಿದೆ.(ಏಜೆನ್ಸೀಸ್)