ಶೈ ಹೋಪ್ ಗೆಲುವಿನ ಸಿಕ್ಸರ್​! ಇಂಗ್ಲೆಂಡ್​ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ ವೆಸ್ಟ್​ ಇಂಡೀಸ್​

wi web
Published on

ತರೌಬ (ಟ್ರಿನಿಡಾಡ್​): ವೆಸ್ಟ್​ ಇಂಡೀಸ್​ ತಂಡ ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್​ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಹಾಲಿ ಟಿ20 ವಿಶ್ವ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ 3&2ರಿಂದ ಸರಣಿ ಗೆದ್ದು ಭರ್ಜರಿ ಸಿದ್ಧತೆ ನಡೆಸಿದೆ. ಗುರುವಾರ ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವಿಂಡೀಸ್​, ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳಿಂದ ಜಯಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​, 19.3 ಓವರ್​ಗಳಲ್ಲಿ 132 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ವಿಂಡೀಸ್​, 19.2 ಓವರ್​ಗಳಲ್ಲಿ 6 ವಿಕೆಟ್​ಗೆ 133 ರನ್​ ಪೇರಿಸಿ ಜಯಿಸಿತು. ಕೊನೇ ಓವರ್​ನಲ್ಲಿ 9 ರನ್​ ಬೇಕಿದ್ದಾಗ ಕ್ರಿಸ್​ ವೋಕ್ಸ್​ ಎಸೆದ ಮೊದಲ ಎಸೆತದಲ್ಲಿ ಜೇಸನ್​ ಹೋಲ್ಡರ್​ 3 ರನ್​ ಕಸಿದರೆ, 2ನೇ ಎಸೆತದಲ್ಲಿ ಶೈ ಹೋಪ್​ ಸಿಕ್ಸರ್​ ಸಿಡಿಸಿ ಗೆಲ್ಲಿಸಿದರು.

ಇಂಗ್ಲೆಂಡ್​: 19.3 ಓವರ್​ಗಳಲ್ಲಿ 132 (ಸಾಲ್ಟ್​ 38, ಬಟ್ಲರ್​ 11, ಲಿವಿಂಗ್​ಸ್ಟೋನ್​ 28, ಬ್ರೂಕ್​ 7, ಮೊಯಿನ್​ ಅಲಿ 23, ಸ್ಯಾಮ್​ ಕರನ್​ 12, ಮೋತಿ 24ಕ್ಕೆ 3, ಹೋಲ್ಡರ್​ 24ಕ್ಕೆ 2, ಹೊಸೈನ್​ 20ಕ್ಕೆ 2, ರಸೆಲ್​ 25ಕ್ಕೆ 2). ವೆಸ್ಟ್​ ಇಂಡೀಸ್​: 19.2 ಓವರ್​ಗಳಲ್ಲಿ 6 ವಿಕೆಟ್​ಗೆ 133 (ಕಿಂಗ್​ 3, ಚಾರ್ಲ್ಸ್​ 27, ಪೂರನ್​ 10, ಶೈ ಹೋಪ್​ 43*, ರುದರ್​ೋರ್ಡ್​ 30, ಟಾಪ್ಲೆ 17ಕ್ಕೆ 2, ರಶೀದ್​ 21ಕ್ಕೆ 2). ಪಂದ್ಯಶ್ರೇಷ್ಠ: ಗುಡಾಕೇಶ್​ ಮೋತಿ, ಸರಣಿಶ್ರೇಷ್ಠ: ಫಿಲ್​ ಸಾಲ್ಟ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net