ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಸೇರಿದ ಟಾಮ್​ ಕರ್ರನ್​​ಗೆ ಆಸೀಸ್​ ಟಿ20 ಲೀಗ್​ನಲ್ಲಿ 4 ಪಂದ್ಯ ನಿಷೇಧ! ಹೀಗಿದೆ ಕಾರಣ...

tom curran web
Published on

ಮೆಲ್ಬೋರ್ನ್​: ಐಪಿಎಲ್​ ಹರಾಜಿನಲ್ಲಿ 1.5 ಕೋಟಿ ರೂ. ಮೌಲ್ಯಕ್ಕೆ ಆರ್​ಸಿಬಿ ತಂಡ ಸೇರಿರುವ ಇಂಗ್ಲೆಂಡ್​ ಆಲ್ರೌಂಡರ್​ ಟಾಮ್​ ಕರನ್​ಗೆ ಆಸ್ಟ್ರೆಲಿಯಾದ ಬಿಗ್​ ಬಾಷ್​ ಲೀಗ್​ನಲ್ಲಿ 4 ಪಂದ್ಯ ನಿಷೇಧ ಹೇರಲಾಗಿದೆ.

ಸಿಡ್ನಿ ಸಿಕ್ಸರ್​ ಆಟಗಾರರಾಗಿರುವ ಟಾಮ್​, ಹೋರ್ಬಟ್​ ಹರಿಕೇನ್ಸ್​ ವಿರುದ್ಧದ ಪಂದ್ಯಕ್ಕೆ ಮುನ್ನ ಪಿಚ್​ ಮೇಲೆ ಓಡಿದ್ದಕ್ಕಾಗಿ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಬೌಲಿಂಗ್​ ಲೈನ್​ ಅಪ್​ ಅಭ್ಯಾಸ ನಡೆಸುತ್ತಿದ್ದ ಟಾಮ್​ಗೆ ಅಂಪೈರ್​ ಎಚ್ಚರಿಕೆ ನೀಡಿದರೂ, ಅವರ ಮಾತು ಕೇಳದೆ ಪಿಚ್​ ಮೇಲೆ ಓಡಿದ್ದರು.

ಇಂಗ್ಲೆಂಡ್​ ಯುವ ಆಲ್ರೌಂಡರ್​ ಸ್ಯಾಮ್​ ಕರ್ರನ್ ಅವರ ಅಣ್ಣನಾಗಿರುವ ಟಾಮ್ ಕರ್ರನ್​, ಅಂಪೈರ್​ ಎಚ್ಚರಿಕೆಯನ್ನು ಲೆಕ್ಕಿಸದೆ ಕ್ರಿಕೆಟ್​ ನಿಯಮವನ್ನು ಮೀರಿರುವುದು ವ್ಯಾಪಕ ಟೀಕೆಗೂ ಗುರಿಯಾಗಿದೆ. ಕೆಲ ಕ್ರಿಕೆಟ್​ ಪ್ರೇಮಿಗಳು ಈ ಶಿಕ್ಷೆ ಕಡಿಮೆಯಾಯಿತು ಎಂದೂ ವಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net