ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ವಿಂಡೀಸ್​ ತಂಡದಲ್ಲಿ ಚಂದ್ರಪಾಲ್​ ಪುತ್ರ, ದೈತ್ಯದೇಹಿ ಸ್ಪಿನ್ನರ್​!

wi web
Published on

ಡೊಮಿನಿಕಾ: ಪ್ರವಾಸಿ ಭಾರತ ತಂಡದ ವಿರುದ್ಧ ಬುಧವಾರದಿಂದ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ 13 ಆಟಗಾರರ ವೆಸ್ಟ್​ ಇಂಡೀಸ್​ ತಂಡವನ್ನು ಪ್ರಕಟಿಸಲಾಗಿದೆ. ದೈತ್ಯದೇಹಿ ಸ್ಪಿನ್ನರ್​ ರಹಕೀಮ್​ ಕಾರ್ನ್​ವಾಲ್​ ಮತ್ತು ಎಡಗೈ ಸ್ಪಿನ್ನರ್​ ಜೋಮೆಲ್​ ವಾರಿಕಾನ್​ ತಂಡಕ್ಕೆ ಮರಳಿದ್ದರೆ, ಎಡಗೈ ಬ್ಯಾಟರ್​ ಕಿರ್ಕ್​ ಮೆಕೆಂಜಿ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಈ ಮುನ್ನ ದಣ ಆಫ್ರಿಕಾ ಪ್ರವಾಸದ ವೇಳೆ ತಂಡದಲ್ಲಿದ್ದ ಮತ್ತು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡದಿರುವ ಎಡಗೈ ಬ್ಯಾಟರ್​ ಅಲಿಕ್​ ಅಥಾನಾಜೆ ಸ್ಥಾನ ಉಳಿಸಿಕೊಂಡಿದ್ದಾರೆ.

ದಿಗ್ಗಜ ಶಿವನಾರಾಯಣ್​ ಚಂದ್ರಪಾಲ್​ ಪುತ್ರ ತೇಜ್​ನಾರಾಯಣ್​ ಚಂದ್ರಪಾಲ್​ ಕೂಡ ತಂಡದಲ್ಲಿದ್ದಾರೆ. 27 ವರ್ಷದ ಎಡಗೈ ಬ್ಯಾಟರ್​ ತೇಜ್​ನಾರಾಯಣ್​ ಈಗಾಗಲೆ ವಿಂಡೀಸ್​ ಪರ 6 ಟೆಸ್ಟ್​ ಆಡಿದ್ದಾರೆ. ಕೈಲ್​ ಮೇಯರ್ಸ್​ ಮತ್ತು ವೇಗಿ ಜೇಡನ್​ ಸೀಲ್ಸ್​ ಗಾಯದಿಂದಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಟೆಸ್ಟ್​ ಕ್ರಿಕೆಟ್​ ಆಡಿದ ಅತ್ಯಧಿಕ ದೇಹತೂಕದ ಆಟಗಾರ ಎನಿಸಿರುವ 140 ಕೆಜಿ ತೂಕ ಮತ್ತು 6.8 ಅಡಿ ಎತ್ತರದ ದೈತ್ಯದೇಹಿ ಕಾರ್ನ್​ವಾಲ್​ 2019ರಲ್ಲಿ ಭಾರತ ವಿರುದ್ಧವೇ ಟೆಸ್ಟ್​ ಪದಾರ್ಪಣೆ ಮಾಡಿದ್ದರು.

ವಿಂಡೀಸ್​ ತಂಡ: ಕ್ರೇಗ್​ ಬ್ರಾಥ್​ವೇಟ್​ (ನಾಯಕ), ಜೆಮೈರ್ನ್​ ಬ್ಲಾ$್ಯಕ್​ವುಡ್​, ಅಲಿಕ್​ ಅಥಾನಾಜೆ, ತೇಜ್​ನಾರಾಯಣ್​ ಚಂದ್ರಪಾಲ್​, ರಹಕೀಮ್​ ಕಾರ್ನ್​ವಾಲ್​, ಜೋಶುವಾ ಡಾ ಸಿಲ್ವಾ, ಶಾನನ್​ ಗೇಬ್ರಿಯಲ್​, ಜೇಸನ್​ ಹೋಲ್ಡರ್​, ಅಲ್ಜಾರಿ ಜೋಸ್​ೆ, ಕಿರ್ಕ್​ ಮೆಕೆಂಜಿ, ರೇಮನ್​ ರೈರ್​, ಕೆಮರ್​ ರೋಚ್​, ಜೋಮೆಲ್​ ವಾರಿಕನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net